April 25, 2026
Saturday, April 25, 2026
spot_img

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ಮುಂದೆ ಪ್ರತೀ ಪಂದ್ಯದಲ್ಲೂ 11 ಸೀಟ್ ಖಾಲಿ, ಮೃತರಿಗಾಗಿ ಭಾವಪೂರ್ಣ ಗೌರವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮೋತ್ಸವದ ವೇಳೆ 11 ಮಂದಿ ಮೃತಪಟ್ಟಿದ್ದರು. ಇವರ ನೆನಪಿಗಾಗಿ ಸ್ಟೇಡಿಯಂನಲ್ಲಿ 11 ಸೀಟುಗಳನ್ನು ಮೀಸಲಿಡಲಾಗುವುದು ಎಂದು ಕೆಎಸ್‌ಸಿಎ ತಿಳಿಸಿದೆ.

ಆರ್‌ಸಿಬಿ ವಿಜಯೋತ್ಸವದ ವೇಳೆ ನೂಕುನುಗ್ಗಲು ಉಂಟಾಗಿತ್ತು. ಕಾಲ್ತುಳಿತದಿಂದ 11 ಮಂದಿ ಜೀವ ಕಳೆದುಕೊಂಡಿದ್ದರು. ಇವರ ನೆನಪಿಗೆ, ಇವರನ್ನು ಎಂದಿಗೂ ಮರೆಯಬಾರದು ಎನ್ನುವ ಆಶಯದದಿಂದ 11 ಸೀಟ್‌ಗಳನ್ನು ಖಾಲಿ ಬಿಡಲಾಗುವುದು.

ಚಿನ್ನಸ್ವಾಮಿಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ 11 ಸೀಟುಗಳನ್ನು ಮೀಸಲಿಡಲಾಗುವುದು ಹಾಗೂ ಈ 11 ಸೀಟುಗಳನ್ನು ಮಾರಾಟ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿಯೂ ಸಹ 11 ಸೀಟುಗಳನ್ನು ಮೃತರ ಹೆಸರಿನಲ್ಲಿ ಮೀಸಲಿಡಲಾಗುವುದು. ಜೊತೆಗೆ ಮುಖ್ಯ ದ್ವಾರದ ಭಾಗದಲ್ಲಿ ಬೋರ್ಡ್ ಅಳವಡಿಕೆ ಮಾಡಿ, ಅದರಲ್ಲಿ ಮೃತರ ಹೆಸರನ್ನ ನಮದು ಮಾಡಲಿದೆ.

ಇನ್ನೂ ಆಟಗಾರರು ಪ್ರ್ಯಾಕ್ಟೀಸ್‌ ಮಾಡುವಾಗ 11 ನಂಬರ್‌ನ ಜೆರ್ಸಿಯನ್ನು ಧರಿಸುತ್ತಾರೆ. 11 ಜನರಿಗೆ ಗೌರವಾರ್ಥವಾಗಿ 11 ಖಾಲಿ ಚೇರ್‌ಗಳನ್ನು ಬಿಡಲಾಗುತ್ತೆ. ಹೀಗಾಗಿ ಆ 11 ಟಿಕೆಟ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !