ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯ ಪ್ರಾಚ್ಯದಲ್ಲಿನ ಸಂಘರ್ಷ ಮುಂದುವರಿದಿದ್ದು, ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ – ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ .
ಈ ಕುರಿತು ಇರಾನ್ ಸ್ಟೇಟ್ ಮೀಡಿಯಾ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ನಟಾಂಜ್‌ನಲ್ಲಿರುವ ಇರಾನ್‌ನ ಯುರೇನಿಯಂ-ಪುಷ್ಟೀಕರಣ ಸ್ಥಾವರದ ಮೇಲೆ ದಾಳಿ ನಡೆದಿದ್ದು, ಆದರೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಹೇಳಿಕೊಂಡಿದೆ. ಆದಾಗ್ಯೂ ಸ್ಥಳೀಯ ನಿವಾಸಿಗಳಲ್ಲಿ ವಿಕಿರಣ ಸೋರಿಕೆಯ ಆತಂಕ ಎದುರಾಗಿದೆ.
ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 220 ಕಿಮೀ ದೂರದಲ್ಲಿ ನಟಾಂಜ್ ಪರಮಾಣು ಸ್ಥಾವರ ಇದ್ದು, ಈ ಹಿಂದೆ ಹಲವು ಬಾರಿ ಈ ಘಟಕದ ಮೇಲೆ ದಾಳಿ ನಡೆದಿತ್ತು.



