June 25, 2026
Thursday, June 25, 2026
spot_img

ಭೂಕಂಪಕ್ಕೂ ಮುನ್ನವೇ ಫೋನ್ ಗೆ ಎಚ್ಚರಿಕೆ ಸಂದೇಶ: ವೆನೆಜುವೆಲಾ ದುರಂತದ ನಡುವೆ ಗಮನ ಸೆಳೆದ ಗೂಗಲ್ ತಂತ್ರಜ್ಞಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ವೆನೆಜುವೆಲಾ ಪ್ರಬಲ ಭೂಕಂಪಕ್ಕೂ ಕೆಲವೇ ಕ್ಷಣಗಳ ಮುನ್ನ ಗೂಗಲ್‌ನ ಆಂಡ್ರಾಯ್ಡ್,ಸಾವಿರಾರು ಫೋನ್ಗನ್ ಗಳಿಗೆ ಭಾರೀ ಭೂಕಂಪದ ಮುನ್ನೆಚ್ಚರಿಕೆ ಸಂದೇಶ ರವಾನಿಸಿತ್ತೆ?


ಹೌದು ಎನ್ನುತ್ತಿದ್ದಾರೆ ಅಲ್ಲಿನ ನಿವಾಸಿಗಳು. ಗೂಗಲ್‌ನ ಆಂಡ್ರಾಯ್ಡ್ ಭೂಕಂಪ ಎಚ್ಚರಿಕೆ ವ್ಯವಸ್ಥೆ ಈ ಸಂದೇಶಗಳನ್ನು ಕಳುಹಿಸಿದ್ದು, ಹಲವರಿಗೆ ಸುರಕ್ಷಿತ ಸ್ಥಳ ಸೇರಿಕೊಳ್ಳಲು ಇದರಿಂದ ಅವಕಾಶ ಸಿಕ್ಕಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿಮಾಡಿವೆ.


ಸಾಮಾನ್ಯವಾಗಿ ಭೂಕಂಪ ಸಂಭವಿಸಿದ ಬಳಿಕವೇ ಅದರ ಪರಿಣಾಮ ತಿಳಿಯುತ್ತದೆ. ಆದರೆ ಈ ತಂತ್ರಜ್ಞಾನ ಭೂಕಂಪದ ಆರಂಭಿಕ ಕಂಪನಗಳನ್ನು ಗುರುತಿಸಿ, ಹೆಚ್ಚು ಅಪಾಯಕಾರಿ ಅಲೆ ತಲುಪುವ ಮುನ್ನವೇ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಹೀಗಾಗಿ ಜನರು ಕಟ್ಟಡಗಳಿಂದ ಹೊರಬರುವುದು, ಸುರಕ್ಷಿತ ಸ್ಥಳಕ್ಕೆ ತೆರಳುವುದು ಅಥವಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಮಯ ಸಿಗುತ್ತದೆ. ಈ ವ್ಯವಸ್ಥೆಯ ಇನ್ನೊಂದು ವಿಶೇಷತೆ ಏನೆಂದರೆ, ಭೂಕಂಪವನ್ನು ಪತ್ತೆಹಚ್ಚಲು ಪ್ರತ್ಯೇಕ ಸಾಧನಗಳ ಅಗತ್ಯವಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿರುವ ಸೆನ್ಸರ್‌ಗಳೇ ಭೂಮಿ ಕಂಪನಗಳನ್ನು ಗುರುತಿಸುತ್ತವೆ. ಒಂದೇ ಪ್ರದೇಶದಲ್ಲಿ ಸಾವಿರಾರು ಮೊಬೈಲ್‌ಗಳು ಒಂದೇ ರೀತಿಯ ಕಂಪನವನ್ನು ದಾಖಲಿಸಿದಾಗ, ನಮ್ಮ ವ್ಯವಸ್ಥೆ ಅದನ್ನು ವಿಶ್ಲೇಷಿಸಿ ತಕ್ಷಣ ಎಚ್ಚರಿಕೆ ಸಂದೇಶ ರವಾನಿಸುತ್ತದೆ ಎಂದು ಗೂಗಲ್ ಮೂಲಗಳು ಹೇಳಿವೆ.


ಪ್ರಕೃತಿ ವಿಕೋಪ ತಡೆಯಲು ಸಾಧ್ಯವಿಲ್ಲ. ಆದರೆ ತಂತ್ರಜ್ಞಾನದ ನೆರವಿನಿಂದ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂಬುದಕ್ಕೆ ವೆನೆಜುವೆಲಾದ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಜೊತೆಗೆ ಇಂದಿನ ಸ್ಮಾರ್ಟ್‌ಫೋನ್‌ಗಳು ಕೇವಲ ಸಂವಹನ ಸಾಧನಗಳಾಗಿರದೆ, ಜೀವ ರಕ್ಷಿಸುವ ಎಚ್ಚರಿಕೆ ವ್ಯವಸ್ಥೆಗಳಾಗಿಯೂ ರೂಪಾಂತರಗೊಳ್ಳುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !