ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಕೆನಾಡ ನಡುವಿನ ಬಿಕ್ಕಟ್ಟು ತಾರಕ್ಕೇರಿದ್ದು, ಕೆನಾಡದಲ್ಲಿ ಖಲಿಸ್ತಾನಿ ಬೆಂಬಲಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಕೆನಾಡದಲ್ಲಿ ಹಿಂದುಗಳಿಗೆ ದೇಶ ತೊರೆಯುವಂತೆ ಸೂಚನೆ ನೀಡಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಭಾರತ ಸರ್ಕಾರ ಕೆನಾಡದಲ್ಲಿನ ಭಾರತೀಯರಿಗೆ ಮಾರ್ಗಸೂಚಿ ಪ್ರಕಟಿಸಿದೆ.
ಕೆನಾಡದಲ್ಲಿನ ರಾಜಕೀಯ ಬೆಳವಣಿಗೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಖಲಿಸ್ತಾನ ವಿರುದ್ಧ ಭಾರತ ಕ್ರಮಕ್ಕೆ ಆಗ್ರಹಿಸಿರುವುದು ಕೆನಡಾ ರಾಜಕೀಯವಾಗಿ ಬಳಕೆ ಮಾಡಿ ದ್ವೇಷ ಸಾಧಿಸುತ್ತಿದೆ. ಭಾರತ ವಿರೋಧಿ ಚಟುವಟಿಕೆಯನ್ನು ವಿರೋಧಿಸುತ್ತಿರುವ ಭಾರತೀಯರು, ಕೆನಾಡದಲ್ಲಿ ನೆಲೆಸಿರುವ ಭಾರತೀಯರ ಮೇಲೆ ಆಕ್ರಮಣದ ಸೂಚನೆಗಳು ಹರಿದಾಡುತ್ತಿದೆ. ಹೀಗಾಗಿ ಭಾರತೀಯರು ಅನಗತ್ಯವಾಗಿ ಕೆನಡಾದ ಬೇರೆ ಬೇರೆ ಪ್ರಾಂತ್ಯಗಳಿಗೆ ಪ್ರಯಾಣ ಮಾಡಬೇಡಿ. ಅನಗತ್ಯವಾಗಿ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡುವುದನ್ನು ತಪ್ಪಿಸಿ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಭಾರತೀಯ ವಿದೇಶಾಂಗ ಸಚಿವಾಲಯ ಈಗಾಗಲೇ ಕೆನಾಡ ಅಧಿಕಾರಿಗಳನ್ನು ಸಂಪರ್ಕಿಸಿ ಭಾರತೀಯರ ರಕ್ಷಣೆಗೆ ಸೂಚಿಸಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಭಾರತೀಯರ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದಿದೆ. ಕೆನಡಾದಲ್ಲಿ 2.3 ಲಕ್ಷ ಭಾರತೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇನ್ನು 7 ಲಕ್ಷ ಭಾರತೀಯರು ಕೆನಾಡದಲ್ಲಿ ವಾಸವಿದ್ದಾರೆ.