October 10, 2026
Saturday, October 10, 2026
spot_img

ಕೃಷಿ ತಾಪಂಡ ಸ್ನೇಹಿತ ವೈಶಾಖ್‌ ಆತ್ಮಹತ್ಯೆಗೆ ಆರ್ಥಿಕ ಖಿನ್ನತೆ ಕಾರಣ? ವಿಚಾರಣೆ ವೇಳೆ ಏನು ಹೇಳಿದ್ರು ನಟಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕೃಷಿ ತಾಪಂಡ ಸ್ನೇಹಿತ ವೈಶಾಖ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಆರ್‌ನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ನಟಿ ಕೃಷಿ ತಾಪಂಡ ವಿಚಾರಣೆ ನಡೆಸಿದ್ದು, ಅವರಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಅನ್ವಯ ವೈಶಾಖ್‌ಗೆ ಹಣಕಾಸಿನ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ. ತೀವ್ರ ಹಣಕಾಸಿನ ಖಿನ್ನತೆಯಿಂದ ವೈಶಾಖ್‌ ನಲುಗಿದ್ದರು. ಮನೆಗೆ ಹೋಗದ ವೈಶಾಖ್‌ ಕೃಷಿ ಮನೆಯಲ್ಲಿಯೇ ವಾಸವಿದ್ದರು. ನಟಿ ಆಗಾಗ ವೈಶಾಖ್‌ಗೆ ನಲವತ್ತರಿಂದ ಐವತ್ತು ಸಾವಿರ ರೂಪಾಯಿಯನ್ನು ನೀಡಿದ್ದಾರೆ.

ಈ ಬಗ್ಗೆ ಎಲ್ಲ ಸೂಕ್ತ ದಾಖಲೆಗಳನ್ನು ಕೃಷಿ ಪೊಲೀಸರಿಗೆ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌:

https://www.instagram.com/p/DaavT52AaG2/?img_index=1

ಈ ನಡುವೆ ವೈಶಾಖ್‌ ಸಾವಿನ ನಂತರ ಕೃಷಿ ಮೊದಲ ಬಾರಿಗೆ ತಮ್ಮ ಫೋಟೊಗಳಿರುವ ಪೋಸ್ಟ್‌ ಹಾಕಿದ್ದಾರೆ. ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ, ಬೇರೆ ದಾರಿಯೇ ಇಲ್ಲದ ಕಾರಣ ಎಂದು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಅಪೂರ್ಣ ಎನ್ನುವ ಕ್ಯಾಪ್ಷನ್‌ ನೀಡಿದ್ದಾರೆ.

Must Read