ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ ಶಮಿ ‘ಕ್ರಿಮಿನಲ್’ ಎಂದು ಅಖಿಲ ಭಾರತೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಬುದ್ದಿನ್ ರಜ್ವಿ ಬರೇಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಶಿಫ್ ಟೂರ್ನಿಯ ಆಸೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದ ವೇಳೆ ಮೊಹಮ್ಮದ್ ಶಮಿ, ರೋಜಾ ಮಾಡದೆ ಎನರ್ಜಿ ಡ್ರಿಂಕ್ ಕುಡಿದಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಇದೇ ಸುದ್ದಿಯಿಂದಾಗಿ ಮೊಹಮ್ಮದ ಶಮಿ ವಿರುದ್ಧ ಮುಸ್ಲಿಂ ಸಮುದಾಯದ ಮೌಲ್ವಿಗಳು ಸಿಡಿದೆದ್ದಿದ್ದಾರೆ. ಇದು ಇಸ್ಲಾಂ ಸಮುದಾಯವು ಒಪ್ಪುವಂತ ಕಾರ್ಯವಲ್ಲ ಎಂದು ಹೇಳುತ್ತಾರೆ.
ಒಂದು ತಿಂಗಳ ರೋಜಾ ಆಚರಣೆ ಸಮಯ ಮುಸ್ಲಿಂ ಧರ್ಮಿಯೂ ಇಡೀ ದಿನ ಉಪವಾಸವಿದ್ದು, ಮುಂಜಾನೆ ರೋಜಾ ಮುರಿಯುತ್ತಾರೆ. ಆದರೆ ಮೊಹಮದ್ ಶಮಿ ಈ ರಂಜಾನ್ ಜಾರಿಯಲ್ಲಿದ್ದ ದಿನಗಳಲ್ಲಿಯೇ ಹೀಗೆ ಎನರ್ಜಿ ಡ್ರಿಂಕ್ ಕುಡಿದಿದ್ದು ಮೌಲಿಗಳನ್ನು ಕೆರಳಿಸಿದೆ.
ಈ ಕುರಿತು ಮಾತನಾಡಿದ ಮೌಲಾನಾ, ಶಮಿ ರೋಜಾ ನಿಯಮಗಳನ್ನು ಪಾಲನೆ ಮಾಡದೆ ಅಪರಾಧ ಮಾಡಿದ್ದಾರೆ. ಅವರು ಹಾಗೆ ಮಾಡಬಾರದಿತ್ತು. ಶರಿಯತ್‌ನ ದೃಷ್ಟಿಯಲ್ಲಿ ಆತ ಅಪರಾಧಿಯಾಗಿದ್ದು, ದೇವರಿಗೆ ಉತ್ತರಿಸಬೇಕು ಎಂದರು.
‘ರೋಜಾ’ ಮುಸ್ಲಿಂರ ಕಡ್ಡಾಯ ಕರ್ತವ್ಯಗಳಲ್ಲಿ ಒಂದಾಗಿದೆ. ಅದನ್ನು ಪಾಲಿಸದವರು ಅಪರಾಧಿಗಳು. ಯಾವುದೇ ಆರೋಗ್ಯವಂತ ಪುರುಷ ಅಥವಾ ಮಹಿಳೆ ‘ರೋಜಾ’ ಆಚರಿಸದಿದ್ದರೆ, ಅವರು ದೊಡ್ಡ ಅಪರಾಧಿಯಾಗುತ್ತಾರೆ ಎಂದು ಮೌಲಾನಾ ಹೇಳಿದರು.
ಮೈದಾನದಲ್ಲಿದ್ದ ಜನರು ಶಮಿಯನ್ನು ನೋಡುತ್ತಿದ್ದರು. ಆತ ಆಡುತ್ತಿದ್ದರೆ ಆರೋಗ್ಯವಾಗಿದ್ದಾನೆ ಎಂದರ್ಥ. ಅಂತಹ ಸ್ಥಿತಿಯಲ್ಲಿ ರೋಜಾ ಆಚರಿಸದೆ ನೀರನ್ನು ಸೇವಿಸುವ ಮೂಲಕ ಜನರಲ್ಲಿ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಅವರು ಕಿಡಿಕಾರಿದರು.
ಇನ್ನು ಮೌಲಾನಾ ಅವರ ಹೇಳಿಕೆ ಸರಿಯಾಗಿಲ್ಲ ಎಂದು ಎನ್‌ಸಿಪಿ ಎಸ್‌ಪಿ ನಾಯಕ ರೋಹಿತ್ ಪವಾರ್ ವಾಗ್ದಾಳಿ ನಡೆಸಿದ್ದಾರೆ.ಕ್ರೀಡೆ ವಿಚಾರದಲ್ಲಿ ಧರ್ಮವನ್ನು ಎಳೆದು ತರಬಾರದು. ಈಗ ಯಾವುದೇ ಮುಸ್ಲಿಂ ವ್ಯಕ್ತಿಯನ್ನು ಕೇಳಿ, ಅವರೆಲ್ಲರೂ ಮೊಹಮ್ಮದ್ ಶಮಿಗೆ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ರೋಹಿತ್ ಪವಾರ್ ತಿರುಗೇಟು ನೀಡಿದ್ದಾರೆ.