September 16, 2026
Wednesday, September 16, 2026
spot_img

ಮುಂಬೈನ ಕುಟುಂಬದ ನಿಗೂಢ ಸಾವಿಗೆ ಕಲ್ಲಂಗಡಿಯೇ ಕಾರಣವಾ? ಇಲ್ಲಿದೆ ಅಸಲಿ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣದಲ್ಲಿ ಆರಂಭಿಕ ಅನುಮಾನಗಳು ಈಗ ಹೊಸ ದಿಕ್ಕು ಪಡೆದಿವೆ. ಮೊದಲಿಗೆ ಕಲ್ಲಂಗಡಿ ಸೇವನೆಯೇ ಸಾವಿಗೆ ಕಾರಣ ಎನ್ನಲಾಗಿದ್ದರೂ, ಇದೀಗ ವಿಧಿವಿಜ್ಞಾನ ವರದಿ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.

ಪರೀಕ್ಷಾ ವರದಿ ಪ್ರಕಾರ, ಮೃತರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆಯಾಗಿದ್ದು, ಕಲ್ಲಂಗಡಿಯಲ್ಲಿ ಯಾವುದೇ ಕೃತಕ ಬಣ್ಣ ಅಥವಾ ಹಾನಿಕಾರಕ ರಾಸಾಯನಿಕ ಬಳಕೆಯ ಸುಳಿವು ಸಿಕ್ಕಿಲ್ಲ. ಜೊತೆಗೆ ಮೆದುಳು, ಹೃದಯ ಹಾಗೂ ಕರುಳು ಸೇರಿದಂತೆ ಕೆಲವು ಅಂಗಾಂಗಗಳು ಅಸಹಜವಾಗಿ ಹಸಿರು ಬಣ್ಣಕ್ಕೆ ತಿರುಗಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.

ಇದನ್ನೂ ಓದಿ:

ಈ ಬೆಳವಣಿಗೆಯ ಬೆನ್ನಲ್ಲೇ ಪೊಲೀಸರು ಚಿಕಿತ್ಸೆ ಪ್ರಕ್ರಿಯೆ, ಆಹಾರ ಸೇವನೆ ಹಾಗೂ ಇತರ ಅನುಮಾನಾಸ್ಪದ ಅಂಶಗಳ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ. ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ವಿವಿಧ ಕೋನಗಳಿಂದ ಪರಿಶೀಲನೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !