October 9, 2026
Friday, October 9, 2026
spot_img

ಕಲ್ಯಾಣ ಕರ್ನಾಟಕಕ್ಕೆ ಹೊಸ ಬಸ್‌ಗಳ ಕೊಡುಗೆ: ಸೆ. 17ರಂದು ಸಿಎಂ ಡಿಕೆಶಿಯಿಂದ ಚಾಲನೆ

ಹೊಸದಿಗಂತ ವರದಿ ಕಲಬುರಗಿ:

ಸೆ.17 ರ ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 24 ನೂತನ ಬಸ್ಸುಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣ್ ಕುಮಾರ್ ಎಂ ವೈ ಪಾಟೀಲ ಅವರು ತಿಳಿಸಿದ್ದಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು 33.35 ಕೋಟಿ ವೆಚ್ಚದಲ್ಲಿ 20 ಹವಾ ನಿಯಂತ್ರಣ‌ ರಹಿತ ಸ್ಲೀಪರ್ ಬಸ್, 20 ಎಸಿ ಸ್ಲೀಪರ್ ಹಾಗೂ 16 ಎಸಿ ಸೀಟರ್ ಸೇರಿದಂತೆ ಒಟ್ಟು 56 ಬಸ್ಸುಗಳ ಖರೀದಿಗೆ ಆದೇಶಿಸಲಾಗಿದ್ದು, ಇದರ ಮೊದಲ ಭಾಗವಾಗಿ ನೂತನ ಬಸ್ಸುಗಳಿಗೆ ಮುಖ್ಯಮಂತ್ರಿಗಳು ಸೆ.17ಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಸ್ಸುಗಳನ್ನು AIS-052, 119, AIS-153 ಮತ್ತು AIS-119 ಆಟೋಮೋಟಿವ್ ಮಾನದಂಡಗಳಂತೆ ತಯಾರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸ್ವಯಂಚಾಲಿತ ಅಗ್ನಿನಂದಕ ಉಪಕರಣ, ವೆಹಿಕಲ್ ಟ್ರ್ಯಾಕಿಂಗ್, ಪ್ಯಾನಿಕ್ ಬಟನ್, ರಿವರ್ಸ್ ಪಾರ್ಕಿಂಗ್ ಅಲರಾಮ್ ಹಾಗೂ ಎಲ್.ಇ.ಡಿ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.

ನಾನ್ ಎಸಿ ಸ್ಲೀಪರ್‌ ಬಸ್ 30, ಎಸಿ ಸ್ಲೀಪರ್‌ ಬಸ್ 36 ಹಾಗೂ ಎಸಿ ಸೀಟರ್ ಬಸ್ 40 ರಿಕ್ಲೈನಿಂಗ್ ಟೈಪ್ ಮಾದರಿಯ ಸೀಟ್‌ಗಳಿವೆ. ಸುಖಕರ ಪ್ರಯಾಣಕ್ಕೆ ಎಲ್ಲಾ ಮಾದರಿಯ ಬಸ್ಸುಗಳಿಗೆ ಆಲ್ ವೀಲ್ ಏರ್ ಸಸ್ಪೆನ್ಷನ್, ಭದ್ರತೆಗೆ 4 ಸಿಸಿ ಕ್ಯಾಮೆರಾಗಳು ಹಾಗೂ ಸೀಟ್‌ಗಳ ಬಳಿ ರೀಡಿಂಗ್ ಲ್ಯಾಂಪ್, ಮೊಬೈಲ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

Must Read