VIRAL VIDEO| 98 ವರ್ಷದ ವೃದ್ಧ ಜೈಲಿನಿಂದ ರಿಲೀಸ್:‌ಸಿಬ್ಬಂದಿಯಿಂದ ಬೀಳ್ಕೊಡುಗೆ ಸಮಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆ ವೃದ್ಧನ ಹೆಸರು ರಾಮ್ ಸೂರತ್, ಪ್ರಕರಣವೊಂದರಲ್ಲಿ ಐದು ವರ್ಷಗಳಿಂದ ಉತ್ತರ ಪ್ರದೇಶದ ಅಯೋಧ್ಯೆ ಜೈಲಿನಲ್ಲಿದ್ದಾರೆ. ಈಗ ಅವರಿಗೆ 98 ವರ್ಷ. ಶಿಕ್ಷೆಯ ಅವಧಿ ಮುಗಿದ ಕಾರಣ ಪೊಲೀಸರು ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಮಾಡಿ ಹಾರ ಹಾಕಿ, ಶಾಲು ಹೊದಿಸಿ, ಸನ್ಮಾನಿಸಿ ಹಣ ನೀಡಿ ಕಳುಹಿಸಲಾಯಿತು.

ವೃದ್ಧನನ್ನು ಕರೆದುಕೊಂಡು ಹೋಗಲು ಆತನ ಕುಟುಂಬದವರಾರೂ ಜೈಲಿಗೆ ಬಂದಿರಲಿಲ್ಲ. ಹಾಗಾಗಿ ಪೊಲೀಸರು ಅವರನ್ನು ಕಾರಿನಲ್ಲಿಯೇ ಕರೆದೊಯ್ದು ಅವರ ಮನೆ ಬಳಿ ಇಳಿಸಿದರು. ರಾಮ್ ಸೂರತ್ ಅವರನ್ನು ಪೊಲೀಸರು ಸನ್ಮಾನಿಸಿದ ವಿಡಿಯೋವನ್ನು ಕಾರಾಗೃಹದ ಡಿಜಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೃದ್ಧನ ವಿರುದ್ಧ ಐಪಿಸಿ ಸೆಕ್ಷನ್ 452, 323, 352 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ವೃದ್ಧನನ್ನು ಹಲವು ವರ್ಷಗಳಿಂದ ಜೈಲಿನಲ್ಲಿಟ್ಟು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಮತ್ತು ವೃದ್ಧನನ್ನು ಬಿಡುಗಡೆ ಮಾಡುವ ವೇಳೆ ಅವರನ್ನು ಗೌರವಪೂರ್ವಕವಾಗಿ ಕಳಿಸಿಕೊಟ್ಟಿದ್ದು ನೆಟ್ಟಿಗರ ಮನಗೆದ್ದಿದೆ. ವೃದ್ಧನ ಮೇಲೆ ಪೊಲೀಸರು ತೋರಿದ ಕರುಣೆ, ಪ್ರೀತಿ, ದಯೆ ದೊಡ್ಡದು ಎಂದಿದ್ದಾರೆ. ವಿಡಿಯೋ ನೋಡಿ ಮೂಕವಿಸ್ಮಿತನಾದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!