BEAUTY TIP| ಚಳಿಗಾಲದ ಒಣ ತ್ವಚೆಗೆ ಈ ಮ್ಯಾಜಿಕ್‌ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಳಿಗಾಲದಲ್ಲಿ ಮುಖ ಬೇಗನೆ ಬಾಡಿ ಹೋಗತ್ತೆ, ಚರ್ಮದ ಕಾಂತಿಯು ಕಳೆದುಕೊಳ್ಳುವಂತೆ ಭಾಸವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಸಮಯದಲ್ಲಿ ಅನೇಕರು ಒಣ ತ್ವಚೆಯಿಂದಾಗಿ ಬೇಸತ್ತು ಹೋಗುತ್ತಾರೆ, ಹಾಗಾಗಿ ನಿಮ್ಮ ಒಣ ತ್ವಚೆಯನ್ನು ಹೋಗಲಾಡಿಸಲು ಈ ತಂತ್ರಗಳನ್ನು ಅನುಸರಿಸಿ ಎಂತಹ ಬದಲಾವಣೆ ಆಗತ್ತೆ ಅಂತ ನೀವೇ ನೋಡಿ.

ಚಳಿಗಾಲದ ಒಣ ತ್ವಚೆಗೆ ಸರಳ ಸೂತ್ರಗಳು:

* ಪ್ರತಿನಿತ್ಯ ಸ್ನಾನದ ನಂತರ ತ್ವಚೆಗೆ ಮಾಯಿಶ್ಚರೈಸ್‌ ಹಚ್ಚಿ.
* ಪ್ರತಿನಿತ್ಯ ಮುಖಕ್ಕೆ ಸನ್‌ಸ್ಕ್ರೀನ್‌ ಹಚ್ಚಿ.
* ದಿನನಿತ್ಯ ಅಗತ್ಯ ನೀರನ್ನು ಕುಡಿಯಿರಿ.
* ಗ್ಲಿಸರಿನ್‌ ಮತ್ತು ರೋಸ್‌ ವಾಟರ್‌ ಬಳಸಿ ತ್ವಚೆಯನ್ನು ಮಾಯಿಶ್ಚರೈಸ್‌ ಮಾಡಿ.
* ತೆಂಗಿನ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯಲ್ಲಿರುವ ಹಾನಿಕಾರಕ ಅಂಶಗಳನ್ನು ನಿವಾರಿಸಿ ಸೂಕ್ತ ಪೋಷಣೆಯನ್ನು ನೀಡುತ್ತದೆ.
* ತ್ವಚೆಗೆ ಬೆಸ್ಟ್‌ ಮಾಯಿಶ್ಚರೈಸರ್‌ ಅಂದ್ರೆ ಅಲೊವೇರಾ. ಇದು ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಎಂಜೀಮ್‌ಗಳನ್ನು ಒಳಗೊಂಡಿದೆ. ಇದು ತ್ವಚೆಯನ್ನು ಮೃದುವಾಗಿಸುತ್ತದೆ.
* ಆಲೀವ್ ಆಯಿಲ್ ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ತ್ವಚೆಯನ್ನು ಸಂರಕ್ಷಿಸುತ್ತದೆ.‌
* ಜೇನು ಮತ್ತು ಮೊಟ್ಟೆಯ ಹಳದಿ ಭಾಗವನ್ನು ಮುಖಕ್ಕೆ ಹಚ್ಚುವುದರಿಂದ ಮುಖಕ್ಕೆ ಬೇಕಾದ ಪೋಷಣೆ ಸಿಗುತ್ತದೆ.
* ಬಾಳೆಹಣ್ಣು ಮತ್ತು ಪಪ್ಪಾಯ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚುವುದರಿಂದ ಅಗತ್ಯ ವಿಟಮಿನ್‌ ಮತ್ತು ಮಿನರಲ್‌ಗಳು ತ್ವಚೆಗೆ ಸಿಗುತ್ತವೆ. ಇದರಿಂದ ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್‌ ಅನ್ನು ಪೂರೈಸಿದಂತಾಗುತ್ತದೆ.

ಮೇಲೆ ತಿಳಿಸಿದ ಎಲ್ಲಾ ತಂತ್ರಗಳನ್ನು ನೀವು ಗಮನದಲ್ಲಿಟ್ಟು ಪಾಲಿಸುವುದರಿಂದ ನಿಮ್ಮ ತ್ವಚೆಯು ತುಂಬಾನೆ ಆರೋಗ್ಯಯುತವಾಗಿ ಕೂಡಿರುತ್ತದಲ್ಲದೇ, ಬಹಳ ಬೇಗನೆ ಫಲಿತಾಂಶ ಕಾಣುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!