ಆನೆಗಳಿಗೆ ವಿಶೇಷವಾದ ರೆಸ್ಟೋರೆಂಟ್: ಸರತಿ ಸಾಲಿನಲ್ಲಿ ನಿಂತ ಸಲಗಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆನೆಗಳಿಗಾಗಿಯೇ ವಿಶೇಷ ಉಪಹಾರ ಗೃಹವೊಂದು ನಿರ್ಮಾಣವಾಗಿದೆ. ತಮಿಳುನಾಡಿನ ಭಾರತೀಯ ಅರಣ್ಯ ಅಧಿಕಾರಿ ಸುರೇಂದರ್ ಮೆಹ್ರಾ ಅವರು ಮದುಮಲೈನಲ್ಲಿ ಆನೆಗಳಿಗಾಗಿ ರೆಸ್ಟೋರೆಂಟ್ ಅನ್ನು ಸ್ಥಾಪಿಸಿದ್ದಾರೆ. ಈ ರೆಸ್ಟೋರೆಂಟ್ ಸಿಕ್ಕ ಸಿಕ್ಕ ಆಹಾರನ್ನು ತಯಾರಿಸುವುದಿಲ್ಲ. ಏಕೆಂದರೆ ಆಹಾರ ತಿಂದ ಆನೆಗಳಿಗೆ ಕಾಯಿಲೆ ಬರದಂತೆ ಸುರೇಂದರ್ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ್ದಾರೆ.  ಇದರ ಅಂಗವಾಗಿ ಆನೆಗಳಿಗೆ ತಯಾರಿಸಿದ ಆಹಾರವನ್ನು ಪಶುವೈದ್ಯರ ಉಸ್ತುವಾರಿಯಲ್ಲಿ ನೀಡಲು ವ್ಯವಸ್ಥೆ ಮಾಡಲಾಗಿದೆ.

ಆನೆಗಳು ಸಂಪೂರ್ಣ ಸಸ್ಯಾಹಾರಿಗಳು. ಅದಕ್ಕಾಗಿಯೇ ಬೇಳೆ, ಅಕ್ಕಿ, ಉಪ್ಪು ಮತ್ತು ಬೆಲ್ಲದಿಂದ ಆಹಾರವನ್ನು ತಯಾರಿಸಲಾಗುತ್ತದೆ. ಆಹಾರವನ್ನು ದೊಡ್ಡ ಉಂಡೆಗಳಾಗಿ ತಯಾರಿಸಲಾಗುತ್ತದೆ. ಸದ್ಯ ಈ ಆನೆ ರೆಸ್ಟೋರೆಂಟ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್ ಮಾಡಿರುವ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಆನೆಗಳಿಗೆ ಎಷ್ಟು ಜಾಗರೂಕತೆಯಿಂದ ಆಹಾರ ತಯಾರಿಸುತ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಈ ವೀಡಿಯೋ ನೋಡಿದ ನೆಟ್ಟಿಗರು ಆಹಾ ರೆಸ್ಟೊರೆಂಟ್ ಊಟ ಆನೆಗಳಿಗೆ ಬೇಕಾದ ಹಾಗೇ ಇದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೊಬ್ಬ ಪ್ರಾಣಿಗಳಿಗೂ ಇಲ್ಲಿ ಸರಪಳಿ ಬೇಕೇ? ಮುಕ್ತವಾಗಿ ತಿರುಗಾಡಲು ಮತ್ತು ಆಹಾರವನ್ನು ಆನಂದಿಸಲು ಅನುವು ಮಾಡಿಕೊಡುವುದು ಉತ್ತಮ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!