ಕ್ಯಾಚ್‌ ಹಿಡಿಯುತ್ತಿದ್ದ ಬೌಲರ್ ಗೆ ಬೇಕಂತಲೇ ಅಡ್ಡಬಂದ ವೇಡ್! ಆಸಿಸ್‌ ಆಟಗಾರನ ಮೋಸದಾಟಕ್ಕೆ ಕ್ರೀಡಾಭಿಮಾನಿಗಳ ಛೀಮಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮೊದಲು ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಜೊತೆಗೆ 3 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಭಾನುವಾರ ಪರ್ತ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯ ರೋಚಕವಾಗಿ ಸಾಗಿದ್ದು ಅಭಿಮಾನಿಗಳಿಗೆ ರಸದೌತಣ ನೀಡಿದೆ. ಆದರೆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್ ಮ್ಯಾಥ್ಯೂ ವೇಡ್​ ನಡವಳಿಕೆಗೆ ಕ್ರೀಡಾಭಿಮಾನಿಗಳು ಕೋಪಗೊಂಡಿದ್ದು, ವೇಡ್‌ ಪಂದ್ಯ ಗೆಲ್ಲುವ ಭರದಲ್ಲಿ ಕ್ರೀಡಾ ಸ್ಫೂರ್ತಿ ಮರೆತು ವರ್ತಿಸಿದ್ದಾರೆ ಎಂದು ಛೀಮಾರಿ ಹಾಕಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್ 209 ರನ್‌ಗಳ ಬೃಹತ್‌ ಮೊತ್ತವನ್ನು ಕಲೆಹಾಕಿತು.ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪಂದ್ಯ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಿತು. ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ (73) ಅದ್ಭುತ ಆಟವಾಡಿದರು. 17 ನೇ ಓವರ್‌ನಲ್ಲಿ ನಡೆದ ಘಟನೆ ಎಲ್ಲರನ್ನು ಚಕಿತಗೊಳಿಸಿತು. ಆ ಒವರ್‌ ನಲ್ಲಿ ಇಂಗ್ಲೆಂಡ್‌ ವೇಗಿ ಮಾರ್ಕ್ ವುಡ್‌ ಎಸೆದ ಮೂರನೇ ಎಸೆತ ಶಾರ್ಟ್‌ ಪಿಚ್‌ ಆಗಿದ್ದು ಡೇವಿಡ್‌ ವಾರ್ನರ್‌ ಗೆ ಸರಿಯಾಗಿ ಹೊಡೆಯಲು ಸಾಧ್ಯವಾಗಲಿಲ್ಲ. ಬ್ಯಾಟ್‌ ಗೆ ತಗುಲಿ ಹೆಲ್ಮೆಟ್‌ಗೆ ಬಡಿದ ಚೆಂಡು ಟಾಪ್-ಎಡ್ಜ್ ಆಗಿ ಮೇಲಕ್ಕೆ ಹಾರಿತು.ಇಂಗ್ಲೆಂಡ್ ವೇಗಿ ರಿಟರ್ನ್ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಾ ಸ್ಟ್ರೈಕರ್‌ನ ತುದಿಗೆ ಓಡಿದರು. ಆದರೆ ಅದೇ ವೇಳೆಗೆ ಕ್ರೀಸ್‌ಗೆ ಹಿಂತಿರುಗುತ್ತಿದ್ದ ಮ್ಯಾಥ್ಯೂ ವೇಡ್‌ ತನ್ನ ತೋಳನ್ನು ಚಾಚಿ ಮಾರ್ಕ್ ವುಡ್ ಕ್ಯಾಚ್‌ ಹಿಡಿಯದಂತೆ ತಡೆದರು. ವೇಡ್‌ ಹೆಚ್ಚಿನಾಂಶ ಬೇಕಂತಲೇ ಬೌಲರ್‌ ನನ್ನು ತಡೆದಿದ್ದು ರಿಪ್ಲೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ವೇಡ್‌ ಮೋಸದಿಂದ ವಾರ್ನರ್‌ ಗೆ ಜೀವಧಾನ ಲಭಿಸಿತು.
ಈ ವೇಳೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಸಮಾಧಾನದಿಂದ ತೋಳುಗಳನ್ನು ಎತ್ತಿದರು. ಆದರೆ ಇಂಗ್ಲೆಂಡ್‌ ಕ್ಯಾಪ್ಟನ್ ಹೇದಯ ವೈಶಾಲ್ಯತೆ ಮೆರೆದು ಔಟ್‌ ಗೆ ಮನವಿ ಮಾಡದಿದ್ದರಿಂದ ವೇಡ್ ಬಚಾವಾದರು. ಇಲ್ಲವಾದಲ್ಲಿ ಫೀಲ್ಡಿಂಗ್‌ ಗೆ ಅಡ್ಡಿಪಡಿಸಿದ ಕಾರಣಕ್ಕೆ ಅವರು ಔಟ್‌ ಆಗಿರುವತ್ತಿದ್ದರು. ಅದಾಗ್ಯೂ ಅದೇ ಓವರ್‌ ನ ಕೊನೆಯ ಎಸೆತದಲ್ಲಿ ವಾರ್ನರ್‌ ಔಟ್‌ ಆದರು.

 

ಆದಾಗ್ಯೂ, ವೇಡ್ ಅವರು ಅಂತಿಮ ಓವರ್‌ನಲ್ಲಿ ಸ್ಯಾಮ್ ಕರನ್ ಎಸೆತದಲ್ಲಿ ಔಟ್‌ ಆಗಿದ್ದು, ಆಸ್ಟೇಲಿಯಾ ಗೆಲುವಿನಂಚಿನಲ್ಲಿ ಎಡವಿತು. 20 ಓವರ್‌ ಗಳಲ್ಲಿ 9 ವಿಕೆಟ್‌ ಗೆ 200 ರನ್‌ ಕಲೆಹಾಕಿದ ಆಸ್ಟೇಲಿಯಾ 8 ರನ್‌ ಗಳಿಂದ ಸೋಲೊಪ್ಪಿಕೊಂಡಿತು.
ಪಂದ್ಯದ ಈ ಘಟನೆಯು ವಿವಾದವನ್ನು ಹುಟ್ಟುಹಾಕಿದೆ. ‘ವೇಡ್‌ ನಡೆ ಕ್ರಿಕೆಟ್‌ನ ಸ್ಪಿರಿಟ್‌ಗೆ ವಿರುದ್ಧ ಎಂದು ಟ್ವಿಟರ್‌ನಲ್ಲಿ ಅನೇಕ ಅಭಿಮಾನಿಗಳು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!