ರೈಲಿನಡಿ ಜಾರಿ ಬೀಳುತ್ತಿದ್ದ ಮಹಿಳೆಯನ್ನು ಕ್ಷಣಮಾತ್ರದಲ್ಲಿ ರಕ್ಷಿಸಿದ ರೈಲ್ವೆ ಪೊಲೀಸ್; ರೋಚಕ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರೈಲ್ವೇ ಪೊಲೀಸ್ ಸಿಬ್ಬಂದಿ ಕ್ಷಣಮಾತ್ರಲ್ಲಿ ತೋರಿದ ಸಮಯ ಪ್ರಜ್ಞೆ ವೃದ್ಧ ಮಹಿಳೆಯ ಜೀವವನ್ನು ಉಳಿಸಿದೆ.  ಮುಂಬೈ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ.
ನಾಗ್ಪುರ-ಮುಂಬೈ ಮಾರ್ಗದ ಅಕೋಲಾ ನಿಲ್ದಾಣದಲ್ಲಿ ಚಲಿಸುವ ರೈಲಿ ಮಹಿಳೆ ಉರುಳಿ ಬೀಳುತ್ತಿರುದನ್ನು ನೋಡಿದ ರೈಲ್ವೆ ರಕ್ಷಣಾ ಪಡೆ ಅಧಿಕಾರಿ ಕ್ಷಣಮಾತ್ರದಲ್ಲಿ ಕಾರ್ಯಪ್ರವೃತ್ತರಾದರು. ಪೊಲೀಸರು ಸಂಜೆ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿರುವಾಗ ವೃದ್ಧ ಮಹಿಳೆ ರೈಲಿನಡಿ ಬೀಳುತ್ತಿರುವುದನ್ನು ನೋಡಿದ್ದಾರೆ. ರೈಲು ವೇಗ ಪಡೆಯುತ್ತಿದ್ದಂತೆ ಮಹಿಳೆ ಬಾಗಿಲಿಗೆ ಸಿಲುಕಿಹಾಕಿಕೊಂಡಿದ್ದಾಳೆ. ಅದನ್ನು ನೋಡಿದ ತಕ್ಷಣವೇ ಅತ್ತ ಓಡಿಹೋದ ಪೋಲೀಸ್‌ ಸಿಬ್ಬಂದಿ ಮಹಿಳೆಯನ್ನು ಹಿಡಿದು, ಪ್ಲಾಟ್‌ಫಾರ್ಮ್‌ ನತ್ತ ಎಳೆದುಕೊಂಡಿದ್ದಾರೆ. ಈ ವೇಳೆ
ಅಲ್ಲಿಗೆ ಓಡಿ ಬರುವ ಜನರ ಗುಂಪು ಮಹಿಳೆಯನ್ನು ಇತರ ರೈಲ್ವೆ ಪೊಲೀಸರ ಜೊತೆಗೂಡಿ ರಕ್ಷಿಸುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಪೊಲೀಸ್‌ ಅಧಿಕಾರಿಯನ್ನು ಜನರು ಸೂಪರ್‌ ಹೀರೋ ಎಂದು ಕರೆದು ಶ್ಲಾಘಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!