ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ ಗಳಲ್ಲಿ ಸಾಮಾನ್ಯವಾಗಿ ಸೀಟುಗಳಿರುವುದಕ್ಕಿಂತ ಹೆಚ್ಚು ಮಂದಿ ಸಂಚರಿಸುತ್ತಾರೆ. ಅನೇಕ ಪ್ರಯಾಣಿಕರು ನಿಂತುಕೊಂಡೆ ಪ್ರಯಾಣಿಸುತ್ತಾರೆ. ಕೆಲವು ಬಸ್‌ಗಳಲ್ಲಿ ಬಾಗಿಲುಗಳು ತೆರೆದಿರುತ್ತವೆ, ಇತರವುಗಳಲ್ಲಿ ಬಾಗಿಲುಗಳು ಮುಚ್ಚಿರುತ್ತದೆ.
ಇಂತಹದ್ದೇ ಘಟನೆ ತಮಿಳುನಾಡಿನ ನಾಮಕ್ಕಲ್ನಲ್ಲಿ ನಡೆದಿದೆ. ಚಲಿಸುತ್ತಿದ್ದ ಬಸ್‌ನಿಂದ ಮಹಿಳೆಯೊಬ್ಬರು ಬಿದ್ದಿದ್ದಾರೆ. ಈ ವೇಳೆ ಬಸ್ ನ ವೇಗವೂ ಹೆಚ್ಚಾಗಿದ್ದು, ಖಾಸಗಿ ಬಸ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶಾರದ ಎಂಬ ಮಹಿಳೆ ಬಟ್ಟೆ ಖರೀದಿಸಲು ಜೇಡರಪಾಳ್ಯಂನಿಂದ ಸೇಲಂಗೆ ಹೋಗಿ ಖಾಸಗಿ ಬಸ್‌ನಲ್ಲಿ ಮನೆಗೆ ಮರಳುತ್ತಿದ್ದರು. ಆಕೆ ಬಸ್ಸಿನಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿದ್ದು, ಗಾಬರಿಗೊಂಡ ಪ್ರಯಾಣಿಕರು ಕಂಡಕ್ಟರ್‌ಗೆ ಮಾಹಿತಿ ನೀಡಿ ಬಸ್ ನಿಲ್ಲಿಸಿದ್ದಾರೆ. ಪ್ರಯಾಣಿಕರು ಆಕೆಗೆ ಸಹಾಯ ಮಾಡಿ ಚಿಕಿತ್ಸೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ராசிபுரம் அருகே ஓடும் பஸ்ஸிலிருந்து தூக்கி வீசப்படும் பெண்ணின் பதபதைக்க வைக்கும் காட்சிகள்.#Rasipuram #namakkalnews #Namakkal #CCTVFootage #viralreels #accident #cctv #viral pic.twitter.com/uhzEQDrNya
— GOWRISANKAR B (@b_gowrisankar22) July 3, 2024