Monday, October 3, 2022

Latest Posts

ಇಂದು ‘ರಾಷ್ಟ್ರೀಯ ಸಿನಿಮಾ ದಿನ’ : ಬರೀ 75ರೂ.ಗೆ ನಿಮ್ಮಿಷ್ಟದ ಸಿನಿಮಾ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ರಾಷ್ಟ್ರೀಯ ಸಿನಿಮಾ ದಿನ ಆಚರಿಸಲಾಗುತ್ತಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಯಾವುದೇ ಸಿನಿಮಾ ನೋಡಲು ನೀವು ಕೊಡಬೇಕಾದ್ದು ಬರೀ 75 ರೂಪಾಯಿ.
ಹೌದು, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಭರ್ಜರಿ ಆಫರ್ ನೀಡಿದ್ದು, ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

ಈಗಾಗಲೇ ಈ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದು, ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ಸೇರಿದಂತೆ ಹಲವು ಕಂಪನಿಗಳು ಕೈ ಜೋಡಿಸಿವೆ. ಅಂದಾಜು ನಾಲ್ಕು ಸಾವಿರ ಸ್ಕ್ರೀನ್‌ಗಳಲ್ಲಿ ಈ ಆಫರ್ ಜಾರಿಯಲ್ಲಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡುವ ಅನುಭವವೇನೋ ಅದ್ಭುತ. ಆದರೆ ದುಬಾರಿ ಟಿಕೆಟ್ ದರದಿಂದಾಗಿ ಮಲ್ಟಿಪ್ಲೆಕ್ಸ್ ಕಡೆ ಜನ ತಲೆ ಹಾಕುವುದಿಲ್ಲ. ಇಂದು ಥಿಯೇಟರ್‌ಗಿಂತ ಕಡಿಮೆ ಬೆಲೆಯಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಬಹುದಾಗಿದೆ.

ಕೋವಿಡ್ ನಂತರ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಂದು ಸಿನಿಮಾ ನೋಡುವುದು ಕಡಿಮೆಯಾಗಿದೆ. ಜನ ಒಟಿಟಿಗೆ ಸಿನಿಮಾ ಬರುವವರೆಗೂ ಕಾದು ಸಿನಿಮಾ ನೋಡುತ್ತಿದ್ದಾರೆ. ಮತ್ತೆ ಜನ ದೊಡ್ಡ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಲು ಉತ್ತೇಜಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!