ಮದುವೆಯಾದ ಮಹಿಳೆ ಅಶ್ಲೀಲ ವಿಡಿಯೋ ನೋಡೋದು ಕ್ರೌರ್ಯವಲ್ಲ: ಮದ್ರಾಸ್‌ ಹೈಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್;
 
ಮದುವೆಯಾದ ಮಹಿಳೆ ಅಶ್ಲೀಲ ವಿಡಿಯೋ ನೋಡೋದು ಅಥವಾ ತನಗೆ ತಾನೇ ಖುಷಿಪಡಿಸಿಕೊಳ್ಳುವಂಥ ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಗಂಡನ ಮೇಳೆ ಮಾಡುವ ಕ್ರೌರ್ಯವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ಜಸ್ಟೀಸ್ ಆರ್. ಪೂರ್ಣಿಮಾ ಅವರಿದ್ದ ಪೀಠ, ಗಂಡ-ಹೆಂಡತಿ ಸಂಬಂಧದಲ್ಲಿ ಇಂಥ ಕೆಲಸಗಳು ತೊಂದರೆ ತರುತ್ತದೆ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ. ಇಂಥ ವರ್ತನೆಯನ್ನು ಗಂಡನ ಮೇಲೆ ಮಾಡೋ ಕ್ರೌರ್ಯ ಎಂದೂ ಪರಿಗಣಿಸೋಕೆ ಆಗಲ್ಲ ಎಂದು ತಿಳಿಸಿದೆ.

ತನ್ನ ಮದುವೆ ರದ್ದು ಮಾಡಲು ಕೌಟುಂಬಿಕ ಕೋರ್ಟ್ ಸಮ್ಮತಿ ನೀಡಲಿಲ್ಲ. ಹೀಗಾಗಿ ಗಂಡ ಹೈಕೋರ್ಟ್‌ ಮೆಟ್ಟಿಲೇರಿದ್ದನು. ಹೆಂಡತಿ ತನ್ನ ಗಂಡನ ಜೊತೆ ಸಂಸಾರ ಮಾಡೋಕೆ ವಾಪಸ್ ಬರಬೇಕು ಅನ್ನೋ ಅರ್ಜಿನೂ ಕೋರ್ಟ್ ವಿಚಾರಣೆ ಮಾಡಿತು.

2018 ಜುಲೈ 11ಕ್ಕೆ ಮದುವೆ ಆಗಿದ್ದ ಗಂಡ ಹೆಂಡತಿ ಕೋರ್ಟ್‌ಗೆ ಈ ಕುರಿತಾಗಿ ಅರ್ಜಿ ದಾಖಲು ಮಾಡಿದ್ದರು. 2020 ಡಿಸೆಂಬರ್ 9 ರಿಂದ ಇಬ್ಬರೂ ಬೇರೆ ಬೇರೆ ಇದ್ದೇವೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ಈ ವೇಳೆ ಗಂಡನ ಪರ ವಕೀಲರು ವಾದ ಮಾಡಿ,ಅವರ ನಡುವಿನ ಸಂಬಂಧ ಸರಿಪಡಿಸೋಕೆ ಆಗದಷ್ಟು ಹಾಳಾಗಿದೆ . ಉಪಯೋಗ ಇಲ್ಲದ ಸಂಬಂಧ ಮುಂದುವರೆಸೋಕೆ ಅರ್ಥ ಇಲ್ಲಎಂದು ಹೇಳಿದರು. ಜೊತೆಗೆ ಹೆಂಡತಿಗೆ ಲೈಂಗಿಕ ರೋಗ ಇದೆ ಎಂದು ಆರೋಪ ಮಾಡಿದ್ದರು. ಆದರೆ, ಇದಕ್ಕೆ ಸರಿಯಾದ ದಾಖಲೆ ಕೋರ್ಟ್‌ ಎದುರಿಗೆ ನೀಡಲು ವಿಫಲವಾಗಿದ್ದನು .

ಇದರ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ, ಅಶ್ಲೀಲ ಚಿತ್ರ ನೋಡಲು ಇಷ್ಟವಿಲ್ಲ ಎಂದ ಗಂಡನನ್ನು, ಇಂಥ ಸಿನಿಮಾ ನೋಡುವಂತೆ ಹೆಂಡತಿ ಬಲವಂತ ಮಾಡಿದರೆ ಮಾತ್ರವೇ ಇದು ಕ್ರೌರ್ಯ ಎನಿಸಿಕೊಳ್ಳಲಿದೆ ಎಂದು ಹೇಳಿದೆ.

ಖಾಸಗಿ ಅನ್ನೋದು ಒಬ್ಬೊಬ್ಬರ ಮೂಲಭೂತ ಹಕ್ಕು. ಗಂಡಸರು ತಮಗೆ ತಾವೇ ಖುಷಿ ಪಡೋದು ಜಗತ್ತಿನಲ್ಲಿ ಒಪ್ಪಿಕೊಳ್ಳೋವ ವಿಷಯವಾಗಿ ನೋಡುತ್ತಾರೆ. ಇದೇ ಕೆಲಸವನ್ನು ಮಹಿಳೆ ಮಾಡಿದರೆ ಅದನ್ನು ತಪ್ಪು ಅಂತಾ ನೋಡುವುದು ಸರಿಯಲ್ಲ ಎಂದೂ ಕೋರ್ಟ್‌ ಹೇಳಿದೆ. ಹಾಗಾಗಿ ಅಶ್ಲೀಲ ವಿಡಿಯೋ ನೋಡೋದು ಹಿಂದುಮದುವೆ ಕಾನೂನಿನ 13(1)ಗೆ ಅನ್ವಯ ತಪ್ಪು ಎಂದು ಸಾಬೀತು ಮಾಡಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!