July 21, 2026
Tuesday, July 21, 2026
spot_img

ಅವಳಿ ಜಲಾಶಯಗಳು ಭರ್ತಿಯಾದರೆ ಮಾತ್ರ ಕಾಲುವೆಗಳಿಗೆ ನೀರು ಬಿಡಲು ಸಾಧ್ಯ: ಸಚಿವ ರಾಮಲಿಂಗಾರೆಡ್ಡಿ

ಹೊಸದಿಗಂತ ವರದಿ ಯಾದಗಿರಿ:

ಯಾದಗಿರಿ:  ಕೃಷ್ಣಾ ಅಚ್ಚು ಕಟ್ಟು ಭಾಗದ ರೈತರ ಜೀವನಾಡಿ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಡನೆ ಮಾತನಾಡಿ, ಉದ್ದೇಶಿಸಿ ಆಲಮಟ್ಟಿ ಶಾಸ್ತ್ರೀ ಹಾಗೂ ನಾರಾಯಣಪುರ ಬಸವಸಾಗರ ಅವಳಿ ಜಲಾಶಯಗಳಲ್ಲಿ  ಕೃಷಿಗಾಗಿ ಕಾಲುವೆಗಳಿಗೆ ನೀರು ಬಿಡಲು ಕೇವಲ 10 ಟಿಎಂಸಿಯಷ್ಟು ಲಭ್ಯವಿದೆ ಒಂದೊಮ್ಮೆ ಕೃಷ್ಣಾ ಹಾಗೂ ಅದರ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಅವಳಿ ಜಲಾಶಯಗಳು ಸಂಪೂರ್ಣ ಭರ್ತಿಯಾದರೆ ಮಾತ್ರ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಕಾಲುವೆ ನೀರು ಹರಿಸಲು ಯೋಚಿಸಲಾಗುವದು ಎಂದು ಹೇಳಿದರು.

ಇದನ್ನೂ ಓದಿ:

ಅವಳಿ ಜಲಾಶಯಗಳಲ್ಲಿನ ಡೆಡ್ ಸ್ಟೋರೇಜ್ ಹೊರತುಪಡಿಸಿ 86 ಟಿಎಂಸಿ ನೀರಿನ ಸಂಗ್ರಹ  ಇದೆ ಇದರಲ್ಲಿ ಕುಡಿಯಲು, ಆರ್ಟಿಪಿಸಿ ಸೇರಿ ಇತರೆ ಉದ್ಯಮಿಗಳಿಗೆ, ಬ್ರಿಜ್ ಕಮ್ ಬ್ಯಾರೆಜುಗಳಿಗೆ, ಕೆರೆ ತುಂಬವದು, ಬಾಷ್ಪೀಕರಣ, ನದಿ ಪಾತ್ರಕ್ಕೆ ನೀರು ಹರಿಸುವದು ಸೇರಿ ಇತರೆ ಬೇಡಿಕೆ ಅನುಗುಣವಾಗಿ ವಾರ್ಷಿಕವಾಗಿ 76 ಟಿಎಂಸಿ ಯಷ್ಟು ಬಳಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ಕಾಲುವೆ ನೀರು ಕೊಡಲು ಆಗುವದಿಲ್ಲಾ ಒಂದೊಮ್ಮೆ ಆಗಷ್ಟ ವೇಳೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಸದ್ಯ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ ಅಂದಾಜು 40 ಸಾವಿರ ಕ್ಯೂಸೆಕ್ ಒಳಹರಿವು ಇದೆ ನಿತ್ಯ ಜಲಾಶಯದಲ್ಲಿ 3 ರಿಂದ 4 ಟಿಎಂಸಿಯಷ್ಟು ನೀರು ಸಂಗ್ರವಾಗುತ್ತಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !