ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ವಿಚಾರ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಬೆಂಬಲ ಸೂಚಿಸಿದ್ದು, ನೀರಿನ ದರ ಏರಿಕೆ ಮಾಡಿ 9 ರಿಂದ 10 ವರ್ಷ ಆಯ್ತು. ಕಳೆದ 10 ವರ್ಷದಿಂದ ಎಲೆಕ್ಟ್ರಿಕ್ ಬಿಲ್ ಎಷ್ಟಾಗಿದೆ? ತೊರೆಕಡಾನಹಳ್ಳಿಯಿಂದ ಕುಡಿಯುವ ನೀರು ಪಂಪ್ ಮಾಡಬೇಕು. ಅದಕ್ಕೆ ವಿದ್ಯುತ್ ಬಿಲ್ ಕಟ್ಟಬೇಕಲ್ವಾ? ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 10 ವರ್ಷದ ಹಿಂದೆ ಸಂಬಳ ಎಷ್ಟಿತ್ತು, ಈಗ ಎಷ್ಟಾಗಿದೆ? ಜೊತೆಗೆ ಹೊಸಹೊಸ ಯೋಜನೆಗಳನ್ನೂ ಮಾಡಬೇಕು. ಹಾಗಾಗಿ ಈಗ ದರ ಏರಿಕೆ ಪ್ರಸ್ತಾವನೆ ಇದೆ ಎಂದು ತಿಳಿಸಿದರು.
ಬಿಜೆಪಿಯವರು ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡ್ತಾರೆ. ಅವರೂ ಕೆಲಸ ಮಾಡಲ್ಲ, ಮಾಡುವವರಿಗೂ ಬಿಡಲ್ಲ ಎಂದು ಟಾಂಗ್ ಕೊಟ್ಟರು. ಬೆಂಗಳೂರು ಜನರಿಗೆ ಉಪಕಾರ ಸ್ಮರಣೆ ಇಲ್ಲ ಎಂಬ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ನಾನು ಕೆಲ ಪತ್ರಿಕೆಗಳನ್ನ ನೋಡಿದೆ. ಅದರಲ್ಲಿ ಆ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಅಂತಾ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಪೆಟ್ರೋಲ್ ಬೆಲೆ ಜಾಸ್ತಿ ಅಂತ ಕೇಂದ್ರದ ವಿರುದ್ಧ ಮುಷ್ಕರ ಮಾಡಿದ ನೀವು ಈಗ ಎಲ್ಲರೂ ಉಪಯೋಗಿಸುವ ನೀರಿನ ಬೆಲೆ ಹೆಚ್ಚು ಮಾಡುತ್ತಿದ್ದೀರ? ಪೆಟ್ರೋಲ್ ಇನ್ನೂ ಉಪಯೋಗಿಸದವರು ಇರಬಹುದು. ಆದರೆ ನೀರು ಉಪಯೋಗಿಸದೆ ಇರುವವರು ಯಾರು?