ಮನಪಾ ವ್ಯಾಪ್ತಿಯಲ್ಲಿ ನೀರಿನ ದರ ಇಳಿಕೆ: ಬಂದರು ನಗರದ ಜನತೆ ಫುಲ್ ಖುಷ್!

ಹೊಸದಿಗಂತ ದಿಜಿಟಲ್‌ ಡೆಸ್ಕ್‌ 
ಮಂಗಳೂರು ನಗರದಲ್ಲಿ ಗೃಹ ಬಳಕೆ ನೀರಿನ ದರ ಇಳಿಕೆ ಮಾಡುವ ಮಂಗಳೂರು ಪಾಲಿಕೆಯ ಮಹತ್ವದ ಪ್ರಸ್ತಾವನೆಗೆ ರಾಜ್ಯ ಸರಕಾರ ಅಧಿಕೃತ ಅನುಮೋದನೆ ನೀಡಿದ್ದು, ಪರಿಷ್ಕೃತ ನೀರಿನ ದರ ಆ.1ರಿಂದ ಜಾರಿಗೆ ಬರಲಿದೆ. ನೀರಿನ ಬಿಲ್‌ನಲ್ಲಿ ಇಳಿಕೆ ಮಂಗಳೂರು ಜನತೆಗೆ ಖುಷಿ ನೀಡಿದೆ.
ಗೃಹ ಬಳಕೆಯ ನೀರಿನ ದರ ಪರಿಷ್ಕರಣೆಯ ಕುರಿತು ಮೇ 31ರಂದು ಮನಪಾ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ ದರಗಳನ್ನು ವಿಧಿಸಲು ಷರತ್ತುಗಳನ್ವಯ ಸರಕಾರ ಅನುಮೋದನೆ ನೀಡಿದೆ. ಇದರಂತೆ ಪರಿಷ್ಕೃತ ನೀರಿನ ದರವು ಮಂಗಳೂರು ಮಹಾನಗರ ಪಾಲಿಕೆಗೆ ಮಾತ್ರ ಅನ್ವಯವಾಗುತ್ತದೆ. ಈ ಪರಿಷ್ಕೃತ ನೀರಿನ ದರವು ಆ.1ರಿಂದ 1 ವರ್ಷದ ಅವಧಿಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ. 1 ವರ್ಷದ ನಂತರ ಮಂಗಳೂರು ಪಾಲಿಕೆಯು ದರ ಪರಿಷ್ಕರಣೆ ಕುರಿತು ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ನೀರಿನ ದರ ಇಳಿಕೆ ಮಾಡುವ ನೆಲೆಯಲ್ಲಿ ಶಾಸಕ ವೇದ ವ್ಯಾಸ ಕಾಮತ್ ಅವರು ವಿಶೇಷ ಒತ್ತು ನೀಡಿ ಸರಕಾರದ ಗಮನಸೆಳೆದ ಹಿನ್ನೆಲೆಯಲ್ಲಿ ಪರಿಷ್ಕರಣೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!