ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಆಟಗಾರರು ಮುಂಬೈಗೆ ಕರೆತಂದ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮಾಡಲಾಯಿತು.
ದೆಹಲಿಯಿಂದ ಮುಂಬೈಗೆ ಆಟಗಾರರನ್ನು ಕರೆತಂದ ವಿಶೇಷ ವಿಮಾನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮಾಡಲಾಯಿತು. ವಿಶ್ವಕಪ್ ಗೆದ್ದ ಟೀಂ ಇಂಡಿಯಾಕ್ಕೆ ಗೌರವ ಸೂಚಕವಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ಈ ವಿಶೇಷ ಗೌರವವನ್ನು ಏರ್ಪಡಿಸಿದ್ದರು.
ಇದಕ್ಕೂ ಮುನ್ನ ದೆಹಲಿಯಿಂದ ಮುಂಬೈಗೆ ಹೊರಡುವ ಮುನ್ನ ಟೀಂ ಇಂಡಿಯಾ ಆಟಗಾರರರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಮೋದಿ ಟೀಂ ಇಂಡಿಯಾ ನಾಯಕರಿಗೆ ಅಭಿನಂದಿಸಿ, ಬಳಿಕ ಆಟಗಾರರ ಜೊತೆ ಮಾತುಕತೆ ನಡೆಸಿದ್ದರು.