ವಯನಾಡು ದುರಂತ: ರಕ್ಷಣಾ ಕಾರ್ಯಕ್ಕೆ BSNL ನೆರವು, ಕರೆ, ಇಂಟರ್ನೆಟ್,ಎಸ್ಎಂಎಸ್ ಫ್ರೀ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯನಾಡು ದುರಂತದಲ್ಲಿ ಮಡಿದವರ ಸಂಖ್ಯೆ 300 ದಾಟಿದೆ. ಇನ್ನೂ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ಇದರ ನಡುವೆ ಬಿಎಸ್ಎನ್‌ಎಲ್ ಮಹತ್ವದ ಘೋಷಣೆ ಮಾಡಿದೆ. ವಯನಾಡಿನಲ್ಲಿ ಕರೆ, ಇಂಟರ್ನೆಟ್ ಹಾಗೂ ಎಸ್ಎಂಎಸ್ ಸಂಪೂರ್ಣವಾಗಿ ಉಚಿತ ಮಾಡಲಾಗಿದೆ.

ವಯನಾಡು ಜಿಲ್ಲೆ ಹಾಗೂ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕಿನಲ್ಲಿ ಬಿಎಸ್‌ಎಸ್‌ಎನ್ಎಲ್ ಸಂಪೂರ್ಣ ಉಚಿತವಾಗಿದೆ. ರಕ್ಷಣಾ ಪ್ರವರ್ತಕರು, ಆಪ್ತರನ್ನು ಕಳೆದುಕೊಂಡಿರುವ ಗ್ರಾಮಸ್ಥರು ಸೇರಿದಂತೆ ಎಲ್ಲರಿಗೂ ತುರ್ತು ನೆರವಾಗಲು BSNL ಮಹತ್ವದ ಹೆಜ್ಜೆ ಇಟ್ಟಿದೆ. ವಯಾನಡು ಜಿಲ್ಲೆ ಹಾಗೂ ನಿಲಂಬೂರು ತಾಲೂಕಿನ ಎಲ್ಲಾ BSNL ಗ್ರಾಹಕರಿಗೆ ಸಂಪೂರ್ಣ ಉಚಿತ ಸೇವೆ ನೀಡಲಾಗಿದೆ.

ಪ್ರತಿ ದಿನ 100 ಎಸ್ಎಂಎಸ್, ಅನ್ ಲಿಮಿಟೆಡ್ ಕರೆ ಹಾಗೂ ಅನ್‌ಲಿಮಿಟೆಡ್ ಡೇಟಾ ಉಚಿತವಾಗಿ ನೀಡಲಾಗಿದೆ. ಭೂಕುಸಿತ ಸ್ಥಳದಲ್ಲಿ BSNL ಫ್ರೀಕ್ವೆನ್ಸಿ ಹೆಚ್ಚಿಸಲಾಗಿದೆ. ಈ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಹಾಗೂ ಕಾಲ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಂಡಿದೆ. ಚೂರ್‌ಮಲ ಸಮೀಪದ ಮುಂಡಕ್ಕೈಲ್‌ನಲ್ಲಿ ಇದೀಗ ಏಕೈಕ BSNL ಟವರ್ ಉಳಿದುಕೊಂಡಿದೆ. ಹೀಗಾಗಿ ಈ ಟವರ್ ಫ್ರೀ ಕ್ವೆನ್ಸಿ ಹೆಚ್ಚಿಸಲಾಗಿದೆ.

ಹೈ ಸ್ಪೀಡ್ 4ಜಿ ಇಂಟರ್ನೆಟ್ ಸೇವೆಯನ್ನು BSNL ಒದಗಿಸುತ್ತಿದೆ. ಈ ಮೂಲಕ ರಕ್ಷಣಾ ಕಾರ್ಯಕರ್ತರು, ಸ್ಥಲೀಯರು, ಗ್ರಾಮಸ್ಥರಿಗೆ ನೆರವಾಗಲಿದೆ ಎಂದು BSNL ಹೇಳಿದೆ.

ಈ ಕುರಿತು ಟ್ವೀಟ್ ಮಾಡಿದೆ. ವಯನಾಡು ಜಿಲ್ಲೆಯಲ್ಲಿ ಹೆಚ್ಚಿನ BSNL ಗ್ರಾಹಕರಿದ್ದಾರೆ. ಬೆಟ್ಟ ಗುಡ್ಡಗಳ ಈ ಪ್ರದೇಶದಲ್ಲಿ BSNL ಕವರೇಜ್ ಹೆಚ್ಚಿದೆ. ಆದರೆ ಭೂಕುಸಿತದಲ್ಲಿ ಹಲವು ಟವರ್‌ಗಳು ಮಣ್ಣುಪಾಲಾಗಿದೆ. ಇದೀಗ ಏಕೈಕ ಟವರ್ ಉಳಿದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!