ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ 9 ಜನರ ಪೈಕಿ 8 ಜನರ ಶವ ಪತ್ತೆ ಆಗಿದೆ.
ಈ ಬಗ್ಗೆ ಗುಂಡ್ಲುಪೇಟೆಯ ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ಹಂಚಿಕೊಂಡಿದ್ದು, ವಯನಾಡಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ 9 ಮಂದಿ ತೆರಳಿದ್ದರು.ಅವರಲ್ಲಿ 8 ಜನರು ಶವವಾಗಿ ಪತ್ತೆಯಾಗಿದ್ದಾರೆ. ಒಬ್ಬರು ಮಾತ್ರ ಪತ್ತೆಯಾಗಬೇಕಿದೆ. ಅವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ ಎಂದರು.
ವಯನಾಡು ಭೂಕುಸಿತ ದುರಂತದಲ್ಲಿ ಮೃತರನ್ನು ಗುರುಮಲ್ಲ, ಸಾವಿತ್ರಿ, ಶಿವಣ್ಣ, ಅಪ್ಪಣ್ಣ, ಅಶ್ವಿನಿ, ಜೀತು, ದಿವ್ಯ ಹಾಗೂ ಶ್ರೇಯಾ ಎಂಬುವರಾಗಿದ್ದಾರೆ. ಸವಿತ ಎಂಬುವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂಬುದಾಗಿ ಹೇಳಿದರು.
ಇಡೀ ಕುಟುಂಬದಲ್ಲಿ ವೃದ್ಧೆ ಮಹದೇವಿ ಎಂಬುವರು ಮಾತ್ರವೇ ಬದುಕುಳಿದಿದ್ದಾರೆ. 9 ಮಂದಿಯಲ್ಲಿ 8 ಜನರು ವಯನಾಡು ಭೂ ಕುಸಿತದ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.