ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡಿನ ಮುಂಡಕ್ಕೈ ಮತ್ತು ಚುರಲ್ಮಲಾ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಭಯಾನಕ ಭೂಕುಸಿತ ಸಂಭವಿಸಿದೆ.
ಸದ್ಯಕ್ಕೆ ಸುಮಾರು 47 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 150ಕ್ಕೂ ಹೆಚ್ಚು ಜನರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ, 15ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ಚುರಲ್ಮಲಾ ಪ್ರದೇಶದಲ್ಲಿ ಸುಮಾರು 250 ಕುಟುಂಬಗಳು ಕಣ್ಮರೆಯಾಗಿವೆ.
ಮುಂಡಕ್ಕೈ, ಚೂರಲ್ಮಲಾ , ಅಟ್ಟಮಾಲಾ ಮತ್ತು ನೂಲ್ಪುಝಾದಲ್ಲಿ 4 ಬಾರಿ ಭೂಕುಸಿತವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಏರಿಯಾಗುತ್ತಿದೆ.
ಮುಂಡಕೈ ಮದರಸಾ ಬಳಿ 150 ಮಂದಿ ಸಿಲುಕಿಕೊಂಡಿದ್ದಾರೆ. ಮುಂಡಕೈ ಮದರಸಾ ಬಳಿ ಸುಮಾರು 50 ಮನೆಗಳು ಮಣ್ಣಿನಡಿ ಸಿಕ್ಕಿಹಾಕಿಕೊಂಡಿದೆ. ಇದೂವರೆಗೂ ಅಲ್ಲಿಂದ ಕೇವಲ 3 ಜನರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ. ಇನ್ನು, ಸ್ಥಳೀಯರ ಕೊಟ್ಟ ಮಾಹಿತಿ ಪ್ರಕಾರ, ಭಾರೀ ಶಬ್ದದೊಂದಿಗೆ ಭೂಕುಸಿತ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ.