ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ವಿಪಕ್ಷಗಳು ನಮ್ಮ ಜೊತೆ ಇರುವ ವಿಶ್ವಾಸವಿದೆ: ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ಪ್ರತಿಪಕ್ಷಗಳು ಕೂಡ ನಮ್ಮೊಂದಿಗೆ ನಿಲ್ಲುವ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

18ನೇ ಲೋಕಸಭಾ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್​ನಲ್ಲಿ ಮೋದಿ ಮಾತನಾಡಿ, ಭಾರತವನ್ನು ಬಡತನದಿಂದ ಮುಕ್ತಗೊಳಿಸುವಲ್ಲಿ ದೊಡ್ಡ ಯಶಸ್ಸು ಸಾಧಿಸಬಹುದು, ನಮ್ಮ ಈ ಮನೆ ಸಂಕಲ್ಪದ ಮನೆಯಾಗಬೇಕು. ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ವಿಪಕ್ಷಗಳು ನಮ್ಮ ಜೊತೆ ಇರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ದೇಶದ ಜನತೆ ಕೂಡ ಪ್ರತಿಪಕ್ಷಗಳಿಂದ ಒಳ್ಳೆಯ ಹೆಜ್ಜೆಗಳನ್ನೇ ನಿರೀಕ್ಷಿಸುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ರಕ್ಷಿಸುತ್ತೇವೆ ಮತ್ತು 50 ವರ್ಷಗಳ ಹಿಂದೆ ಮಾಡಲಾದ ಕೆಲಸವನ್ನು ಭಾರತದಲ್ಲಿ ಯಾರೂ ಮಾಡಲು ಧೈರ್ಯ ಮಾಡಬಾರದು ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!