ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ತಟಸ್ಥವಾಗಿಲ್ಲ, ಶಾಂತಿ ಕಡೆ ಇದ್ದೇವೆ ಎಂದು ಯುದ್ಧಪೀಡಿತ ಉಕ್ರೇನ್‌ಗೆ ಐತಿಹಾಸಿಕ ಭೇಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ನಾವುತಟಸ್ಥರಲ್ಲ, ಮೊದಲಿನಿಂದಲೂ ನಾವು ಶಾಂತಿ ಸ್ಥಾಪನೆಗೆ ಕರೆ ನೀಡಿದ್ದೇವೆ. ನಾವು ಬುದ್ಧನ ಭೂಮಿಯಿಂದ ಬಂದಿದ್ದೇವೆ. ಅಲ್ಲಿ ಯುದ್ಧಕ್ಕೆ ಸ್ಥಳವಿಲ್ಲ. ನಾವು ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹಾತ್ಮ ಗಾಂಧಿಯವರ ಭೂಮಿಯಿಂದ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವು ಸಮಯದ ಹಿಂದೆ ನಾನು ಸಮರ್ಕಂಡ್‌ನಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದಾಗ, ಇದು ಯುದ್ಧದ ಯುಗವಲ್ಲ ಎಂದು ನಾನು ಅವರಿಗೆ ಹೇಳಿದ್ದೆ. ಕಳೆದ ತಿಂಗಳು ನಾನು ರಷ್ಯಾಕ್ಕೆ ಹೋದಾಗ, ಯಾವುದೇ ಸಮಸ್ಯೆಗೆ ಪರಿಹಾರವು ಯುದ್ಧಭೂಮಿಯಲ್ಲಿ ಎಂದಿಗೂ ಸಿಗುವುದಿಲ್ಲ ಎಂದು ಸ್ಪಷ್ಟವಾದ ಮಾತುಗಳಲ್ಲಿ ಹೇಳಿದ್ದೆ ಎಂದು ತಿಳಿಸಿದ್ದಾರೆ.