ಹೊಸದಿಗಂತ ವರದಿ,ಕಲಬುರಗಿ:
ಈ ದೇಶದ ಮಣ್ಣಿನಲ್ಲಿ ಹುಟ್ಟಿ,ಈ ದೇಶದ ಮಣ್ಣಿನ ಅನ್ನವನ್ನು ತಿಂದು,ಇದೇ ದೇಶದ ಮಣ್ಣಿನ ವಿರುದ್ಧ ಘೋಷಣೆ ಕೂಗುವಂತಹ ಶಕ್ತಿಗಳನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ಅವರು ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಹಿಂದು ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಾವು ಯಾರು ಮುಸ್ಲಿಂ ವಿರೋಧಿಗಳಲ್ಲ.ಬದಲಾಗಿ ಯಾರು ಈ ದೇಶದ ಅನ್ನವನ್ನು ತಿಂದು, ಪಾಕಿಸ್ತಾನ ಪರವಾದ ಘೋಷಣೆ ಹೇಳುತ್ತಾರೆಯೋ ಅವರೆಲ್ಲರ ವಿರೋಧಿಗಳು ನಾವು ಎಂದು ಗುಡುಗಿದರು.
ಎಲ್ಲರು ಹೇಳುತ್ತಾರೆ, ಸ್ವಾಮೀಜಿ ಮುಸ್ಲಿಂ ವಿರೋಧಿ ಅಂತ, ಆದರೆ,ನಾನ್ಯಾವತ್ತು ಮುಸ್ಲಿಂ ವಿರೋಧಿ ಅಲ್ಲ.ನನ್ನ ಮಠಕ್ಕೆ ನಿತ್ಯ ಹತ್ತಾರು ಜನ ಮುಸ್ಲಿಂ ಬಾಂಧವರು ನ್ಯಾಯ ಕೇಳಿ,ಆಗಮಿಸುತ್ತಾರೆ.ಹೀಗಾಗಿ ನಾವು ಮುಸ್ಲಿಂ ಬಾಂಧವರ ನ್ಯಾಯ, ಸಮಸ್ಯೆಗಳನ್ನು ಬಗೆಸರಿಸಿ ಕೊಟ್ಟಂತವರು,ಅವರ ವಿರೋಧಿಗಳಲ್ಲ ಎಂದು ನುಡಿದರು.