September 7, 2026
Monday, September 7, 2026
spot_img

ನಾವು ಗೆಲ್ಲೋಕೆ ಬಂದಿದ್ದೀವಿ! ಮಾತಿಗೆ ತಕ್ಕಂತೆ ಮೈದಾನದಲ್ಲಿ ಧೂಳೆಬ್ಬಿಸಿದ ಇಶಾನ್ ಕಿಶನ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಅಂದ್ಮೇಲೆ ಬರಿ ಬಾಯಲ್ಲಿ ಮಾತಾಡಿದ್ರೆ ನಡೆಯಲ್ಲ, ಬ್ಯಾಟ್ ಹಿಡಿದು ಮೈದಾನಕ್ಕಿಳಿದು ತೋರಿಸಬೇಕು. ಅದನ್ನೇ ಈಗ ಈಸ್ಟ್ ಝೋನ್ ಕ್ಯಾಪ್ಟನ್ ಇಶಾನ್ ಕಿಶನ್ ಮಾಡಿ ತೋರಿಸಿದ್ದಾರೆ. ದುಲೀಪ್ ಟ್ರೋಫಿ ಫೈನಲ್ ಪಂದ್ಯ ಶುರುವಾಗೋಕೂ ಮುಂಚೆ, “ನಾವು ಇಲ್ಲಿಯವರೆಗೆ ಬಂದಿರೋದು ಮ್ಯಾಚ್ ಆಡಿ ಮನೆಗೆ ಹೋಗೋಕಲ್ಲ, ಇತಿಹಾಸ ಬರೆಯೋಕೆ!” ಎಂದು ಟೀಮ್ ಮೆಂಬರ್ಸ್ ಮುಂದೆ ಮಾತನಾಡಿದ್ರು. ಹೇಳಿದ ಮಾತಿನಂತೆ ಮೊದಲ ದಿನವೇ ಮೈದಾನದಲ್ಲಿ ಮಾಡಿ ತೋರಿಸಿಬಿಟ್ಟಿದ್ದಾರೆ.

ಪಂದ್ಯ ಶುರುವಾಗೋಕೂ ಮುಂಚೆ ಟೀಮ್ ಹಡಲ್‌ನಲ್ಲಿ ನಿಂತು ಕಿಶನ್ ಆಡಿದ ಮಾತುಗಳು ಪ್ರತಿಯೊಬ್ಬ ಪ್ಲೇಯರ್ ಗೂ ಗೆಲುವಿನ ಕಿಚ್ಚು ಹೊತ್ತಿಸಿತ್ತು. “ಫೈನಲ್ ಬಂದಿದ್ದೀವಿ ಎಂದು ಖುಷಿಪಟ್ಟು ಕೂರೋದಲ್ಲ, ಟ್ರೋಫಿ ತಗೊಂಡು ಹೋಗೋದೊಂದೇ ನಮ್ಮ ಗುರಿ” ಎಂದು ಸೌಂಡ್ ಮಾಡಿದ ಕಿಶನ್, ಆಮೇಲೆ ಬ್ಯಾಟ್ ಹಿಡಿದು ಮೈದಾನಕ್ಕಿಳಿದಾಗ ಸೌತ್ ಝೋನ್ ಬೌಲರ್‌ಗಳ ಗತಿಯೇ ಉಲ್ಟಾಪಲ್ಟಾ ಆಯ್ತು. ಸೌತ್ ಬೌಲರ್‌ಗಳು ಎಷ್ಟೇ ಟ್ರೈ ಮಾಡಿದ್ರೂ, ಕಿಶನ್ ಆಟದ ಮುಂದೆ ಅವರ ಯಾವ ಪ್ಲಾನ್ ಕೂಡ ವರ್ಕ್ ಆಗಲಿಲ್ಲ.

ಸೌತ್ ಝೋನ್ ಬೌಲಿಂಗ್ ಅಟ್ಯಾಕ್ ಅನ್ನು ಸದೆಬಡಿದ ಇಶಾನ್ ಕಿಶನ್, ಜವಾಬ್ದಾರಿಯಿಂದ ಆಟ ಆಡ್ತಾನೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ರು. ಮೈದಾನದ ಎಲ್ಲಾ ಮೂಲೆಗೂ ಬಾಲ್ ಓಡಿಸಿ, ಮೊದಲ ದಿನದಾಟ ಮುಗಿಯೋದರೊಳಗೆ ಅಜೇಯ 111 ರನ್ ಬಾರಿಸಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ರು. ನಾಯಕ ಅಂದ್ರೆ ಮುಂದೆ ನಿಂತು ಮುನ್ನಡೆಸಬೇಕು ಅನ್ನೋದಕ್ಕೆ ಕಿಶನ್ ಆಟವೇ ಬೆಸ್ಟ್ ಎಕ್ಸಾಂಪಲ್.

ಕಿಶನ್ ಅವರ ಈ ಶತಕದಿಂದ ಈಸ್ಟ್ ಝೋನ್ ತಂಡ ಮೊದಲ ದಿನದ ಆಟ ಮುಗಿಯುವಷ್ಟರಲ್ಲಿ ಬೋರ್ಡ್ ಮೇಲೆ ಬರೋಬ್ಬರಿ 385/4 ರನ್‌ಗಳ ಮೊತ್ತವನ್ನು ದಾಖಲಿಸಿತು. ಫಸ್ಟ್ ಡೇನೇ ಈ ರೇಂಜ್‌ಗೆ ರನ್ ಬಾರಿಸಿರೋದನ್ನು ನೋಡಿ ಸೌತ್ ಝೋನ್ ಟೀಮ್ ಈಗ ಫುಲ್ ಪ್ರೆಷರ್‌ನಲ್ಲಿದೆ. ಒಟ್ಟಿನಲ್ಲಿ, “ನಾವು ಬರಿ ಆಡೋಕೆ ಬಂದಿಲ್ಲ, ಗೆಲ್ಲೋಕೆ ಬಂದಿದ್ದೀವಿ” ಎಂದು ಕಿಶನ್ ಹೊಡೆದ ಡೈಲಾಗ್ ಈಗ ಸೌತ್ ಝೋನ್ ಪಾಲಿಗೆ ನೈಟ್ ಮೇರ್ ಆಗಿ ಬದಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar