ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಕ್ಷಣ ಕಂಡು ನಾನು ಭಾವುಕನಾದೆ … ಈ ಮಾತು ಹೇಳಿದ್ದು ಮುಸ್ಲಿಂ ಕರಸೇವಕ ಮೊಹಮ್ಮದ್ ಹಬೀಬ್.
ಜ.22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಬೀಬ್ ಮನೆಗೆ ಅಕ್ಷತೆ, ಪತ್ರ ಮತ್ತು ರಾಮಮಂದಿರ ಫೋಟೋ ಕಳುಹಿಸಲಾಗಿದೆ. ಇದನ್ನು ಕಂಡು ಭಾವುಕ ಭಾವುಕನಾದೆ’ ಎಂದು 70 ವರ್ಷದ ಕರಸೇವಕ ಹಾಗೂ ಬಿಜೆಪಿಯ ಜಿಲ್ಲಾ ಘಟಕದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಹಬೀಬ್ ತಿಳಿಸಿದ್ದಾರೆ.
ನಾನು ಕೂಡ ಕರಸೇವಕ. 1992ರ ಡಿಸೆಂಬರ್ 2 ರಂದು ನಾಲ್ಕೈದು ದಿನಗಳ ಕಾಲ ಕರಸೇವಕರೊಂದಿಗೆ ಅಯೋಧ್ಯೆಯಲ್ಲಿ ನಾನು ಕೂಡ ಇದ್ದೆ. 1992 ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ನೆಲಸಮ ಮಾಡಲಾಯಿತು. ಇದು ದೇಶಾದ್ಯಂತ ಧಂಗೆ ಹುಟ್ಟುಹಾಕಿತು ಎಂದು ಹಬೀಬ್ ನೆನಪಿಸಿಕೊಂಡಿದ್ದಾರೆ.
ಜನವರಿ 22 ರಂದು ಎಲ್ಲರಿಗೂ ಐತಿಹಾಸಿಕ ದಿನವಾಗಲಿದೆ. ಈ ದಿನಕ್ಕಾಗಿ ನಾವು ತಪಸ್ಸು ಮಾಡಿದ್ದೆವು ಎಂದು ಮೊಹಮ್ಮದ್ ಹಬೀಬ್ ತಿಳಿಸಿದ್ದಾರೆ. ಜ.22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತೇನೆ. ಮುಂದೊಂದು ದಿನ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ರಾಮನ ದರ್ಶನ ಪಡೆಯಲಿದ್ದೇನೆ ಎಂದು ಹಬೀಬ್ ಹೇಳಿದ್ದಾರೆ.