ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ 54 ಸ್ಥಳಗಳನ್ನು ಗುರುತಿಸಿದ್ದೇವೆ: ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ 54 ಸ್ಥಳಗಳನ್ನು ಗುರುತಿಸಿದ್ದೇವೆ, ಉಳಿದವುಗಳನ್ನು ಪತ್ತೆಹಚ್ಚಲು ಪ್ರಯತ್ನ ಮಾಡುತ್ತೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ.

ನಗರದಲ್ಲಿ ಅಧಿಕಾರಿಗಳು ಇಲ್ಲಿಯವರೆಗೆ 54 ಕ್ಕೂ ಹೆಚ್ಚು ಯಾತ್ರಾ ಸ್ಥಳಗಳನ್ನು ಗುರುತಿಸಿದ್ದಾರೆ. ಉಳಿದವುಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಸನಾತನ ಹಿಂದೂ ಧರ್ಮದ ಪ್ರಮುಖ ತಾಣಗಳು ಭಾರತದ ಪರಂಪರೆಯ ಸಂಕೇತಗಳಾಗಿವೆ ಎಂದು ಒತ್ತಿ ಹೇಳಿದರು. ದೇವಸ್ಥಾನದ ಸ್ಥಳಗಳನ್ನು ನಾವು ಗುರುತಿಸಿ ಜಗತ್ತಿಗೆ ತೋರಿಸುತ್ತೇವೆ. ದೇವರು ಯಾರಿಗೆ ಕಣ್ಣುಗಳನ್ನು ಕೊಟ್ಟಿದ್ದಾರೋ, ಅವರು ನೋಡಲಿ. ಸಂಭಾಲ್‌ನಲ್ಲಿ ಏನಾಯಿತು ಸಂಭಾಲ್ ಸತ್ಯ ಎಂದರು.

ಧ್ವಂಸಗೊಂಡ ಹಿಂದೂ ದೇವಾಲಯಗಳ ಅವಶೇಷಗಳ ಮೇಲೆ ನಿರ್ಮಿಸಲಾದ ಮಸೀದಿಗಳ ವಿಷಯಕ್ಕೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್, ಹಿಂದೂ ದೇವಾಲಯಗಳನ್ನು ನಾಶಪಡಿಸಿದ ನಂತರ ನಿರ್ಮಿಸಲಾದ ಪೂಜಾ ಸ್ಥಳಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಇಸ್ಲಾಂ ಹೇಳುತ್ತದೆ. ಹಾಗಾದರೆ ಅವುಗಳನ್ನು ಏಕೆ ನಿರ್ಮಿಸಲಾಯಿತು, ಸನಾತನ ಹಿಂದೂ ಧರ್ಮದ ಮಹತ್ವದ ತಾಣಗಳೆಲ್ಲವೂ ನಮ್ಮ ಪರಂಪರೆಯ ಸಂಕೇತಗಳಾಗಿವೆ ಎಂದು ಪುನರುಚ್ಛರಿಸಿದರು. ಹೆಚ್ಚಿನ ಪುರಾವೆಗಳು ಸಿಗುವುದರಿಂದ ಸರ್ಕಾರವು ದೇವಾಲಯಗಳನ್ನು ಪುನರುಜ್ಜೀವನಗೊಳಿಸುವುದನ್ನು ಮುಂದುವರಿಸುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!