ಹೊಸದಿಗಂತ ಕೊಪ್ಪಳ:
ಶಾಸಕ ಮುನಿರತ್ನ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಸಾಪೂರ ಗ್ರಾಮದ ಲಘು ವಿಮಾನ ನಿಲ್ದಾಣ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುನಿರತ್ನ ಪ್ರಕರಣ ಸಂಬಂಧ ಶಾಸಕರುಗಳು ನನ್ನ ಬಳಿ ಬಂದು ಎಸ್ಐಟಿ ಮಾಡಲು ಮನವಿ ಸಲ್ಲಿಸಿದ್ದರು. ಮುನಿರತ್ನ ವಿರುದ್ಧ ಮೂರ್ನಾಲ್ಕು ಪ್ರಕರಣ ಇರುವಿದರಿಂದ ಎಸ್ಐಟಿ ರಚಿಸಲಾಗಿದೆ ಎಂದರು.
ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ರಸ್ತೆ ದುರಸ್ತಿ ಕೆಲಸ ಮಾಡಲಿಲ್ಲ. ರಸ್ತೆಗಳು ಹಾಳಾಗಿದ್ದು, ಅದಷ್ಟು ಬೇಗನೆ ದುರಸ್ತಿ ಮಾಡಲಾಗುವುದು ಎಂದರು.