ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಇಲ್ಲದೇ ಬದುಕುವ ಶಕ್ತಿ ನಮಗೆ ಇದೆ, ಆದರೆ ಸರ್ಕಾರ ಇಲ್ಲದೆ ಸಿನಿಮಾ ಬದುಕೋಕೆ ಸಾಧ್ಯವಾ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.
`ನಟ್ಟು, ಬೋಲ್ಟು ಟೈಟು’ ಹೇಳಿಕೆಗೆ ಚಿತ್ರರಂಗ ಟೀಕೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅವರು ಟೀಕೆ ಮಾಡಲಿ ಅಂತಾನೇ ಹೇಳುತ್ತಿದ್ದೇನೆ. ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎಂದು ನನಗೂ ಗೊತ್ತಿದೆ, ಸಹಾಯ ಮಾಡಿಸಿಕೊಂಡವರಿಗೂ ಗೊತ್ತಿದೆ ಎಂದರು.
ಇದು ರಾಜ್ಯದ ಹಣ, ನೆಲ, ಜಲ, ನಿಮ್ಮ ಭಾಷೆ. ಈಗ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಮಾಡಿರುವುದು ಅವರ ಚಿತ್ರ ಬೆಳೆಯಲಿ ಎಂದು. ಅವರ ಚಿತ್ರಗಳಿಗೆ ಪ್ರಚಾರ ಅವ್ರು ಮಾಡದೇ ನಾವು ಬೆಳಗ್ಗೆ ಸಂಜೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.