ಕಾಂಗ್ರೆಸ್ ತತ್ವ, ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರುವವರನ್ನು ನಾವು ಸ್ವಾಗತಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತವನ್ನು ನಿಯತ್ತಾಗಿ ಒಪ್ಪಿ ಪಕ್ಷಕ್ಕೆ ಬರುವವರನ್ನು ನಾವು ಸ್ವಾಗತಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಸೋಮವಾರ ಸಂಜೆ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಜಗದೀಶ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ತೆರಳುತ್ತಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಾರ ರಕ್ತವನ್ನೂ ಪರೀಕ್ಷೆ ಮಾಡಿ ಪಕ್ಷಕ್ಕೆ ಬರಮಾಡಿಕೊಂಡಿಲ್ಲ. ಪಕ್ಷದ ತತ್ವ, ನೀತಿ, ನಾಯಕತ್ವವನ್ನು ಒಪ್ಪಿಕೊಂಡು ಬರುವವರನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ಬಿಜೆಪಿಗೆ ಓಟು ಬರ್ತದೆ ಅಂತ ಸಿಎಂ ಬೊಮ್ಮಾಾಯಿ ಹೇಳುವುದಾದರೆ ಅವರು ಏನೂ ಕೆಲಸ ಮಾಡಿಲ್ಲ ಅಂತ ಅರ್ಥ. ಕೆಲಸದಿಂದ ಓಟು ಬರುತ್ತದೆ ಅಂತ ಬೊಮ್ಮಾಾಯಿ ಹೇಳಿಲ್ಲ. ಆದರೆ ಸಿದ್ದರಾಮಯ್ಯ ಹೇಳಿಕೆಯಿಂದ ಇವರಿಗೆ ಓಟು ಬರುತ್ತದೆ ಅಂದರೆ ಬಿಜೆಪಿಯವರು ಬಹಳ ಹತಾಶೆಗೆ ಒಳಗಾಗಿದ್ದಾಾರೆ. ಸಹಜವಾಗಿ ಅವರು ಗೆಲ್ಲುವ ಸ್ಥಿತಿಯಲ್ಲಿ ಇಲ್ಲದೆ ಈ ರೀತಿ ಮಾತನಾಡ್ತಾರೆ ಎಂದು ಖರ್ಗೆ ಟೀಕಿಸಿದರು.

ರಾಜಕೀಯ ಪಕ್ಷಗಳು ಅವರವರ ಐಡಿಯಾಲಾಜಿ ಮೇಲೆ ಕೆಲಸ ಮಾಡುತ್ತವೆ. ತಮ್ಮ ಜಾತಿ, ಧರ್ಮವನ್ನು ಚುನಾವಣೆ, ರಾಜಕೀಯದಲ್ಲಿ ತಂದರೆ ಒಳ್ಳೆಯದಲ್ಲ. ಓಟಿಗಾಗಿ ಮಾತನಾಡಿದರೆ ಸಮಾಜ ಮತ್ತು ದೇಶಕ್ಕೆ ಒಳ್ಳೆಯದಲ್ಲ ಎಂದರು.

ಜಿಲ್ಲಾಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಎಂಎಲ್ಸಿ ಐವನ್ ಡಿಸೋಜ, ನವೀನ್ ಡಿಸೋಜ, ಭಾಸ್ಕರ ಮೊಯ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!