ಕುಸಿದ ಡೆಲ್ಲಿಗೆ ಪಾಂಡೆ, ಪಟೇಲ್ ಆಸರೆ: ಹೈದರಾಬಾದ್ ಗೆ 145 ರನ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಮನೀಶ್ ಪಾಂಡೆ ಹಾಗೂ ಅಕ್ಸರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸರೆಯಾಗುವ ಮೂಲಕ 9 ವಿಕೆಟ್ ಕಳೆದುಕೊಂಡು 144 ರನ್ ಸಿಡಿಸಿದೆ. ಹೈದರಬಾದ್ ಗೆ ಸ್ಪರ್ಧಾತ್ಮಕ ಮೊತ್ತ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಗೆ ತಕ್ಕ ಆರಂಭ ಸಿಗಲಿಲ್ಲ. ಫಿಲಿಪ್ ಸಾಲ್ಟ್ ಡಕೌಟ್ ಆದರು. ಇತ್ತ ಮಿಚೆಲ್ ಮಾರ್ಶ್ 15 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ನಾಯಕ ಡೇವಿಡ್ ವಾರ್ನರ್ 20 ಎಸೆತದಲ್ಲಿ 21 ರನ್ ಸಿಡಿಸಿ ನಿರ್ಗಮಿಸಿದರು. ಸರ್ಫಾರಾಜ್ ಖಾನ್ 10 ರನ್ ಸಿಡಿಸಿ ಔಟಾದರು.

ಕುಸಿದ ತಂಡಕ್ಕೆ ಮನೀಶ್ ಪಾಂಡೆ ಹೋರಾಟದ ಮೂಲಕ ಚೇತರಿಕೆ ನೀಡಿದರು. ಅಮನ್ ಹಕೀಮ್ ಖಾನ್ ಕೇವಲ 4 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಜೊತೆ ಸೇರಿದ ಮನೀಶ್ ಪಾಂಡೆ ಇನ್ನಿಂಗ್ಸ್ ಮುಂದುವರಿಸಿದರು. ಅಕ್ಸರ್ ಪಟೇಲ್ 34 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಇತ್ತ ಮನೀಶ್ ಪಾಂಡೆ 27 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಯಾರಿಂದಲೂ ರನ್ ಹರಿದು ಬರಲಿಲ್ಲ. 9 ವಿಕೆಟ್ ಕಳೆದುಕೊಂಡು 144ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!