ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಅವರು ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ನೀಡಿದ್ದಾರೆ. ಇದರಿಂದ ಇವರ 29 ವರ್ಷಗಳ ದಾಂಪತ್ಯ ಕೊನೆ ಆಗಿದೆ. ಇಬ್ಬರೂ ಇನ್ನೇನು ಮೂರು ದಶಕಗಳ ದಾಂಪತ್ಯ ಸಂಭ್ರಮವನ್ನು ಆಚರಿಸಬೇಕಿತ್ತು.
ಈ ಬಗ್ಗೆ ಟ್ವೀಟ್ ಮಾಡಿರೋ ರೆಹಮಾನ್ ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ ರೆಹಮಾನ್.
1995ರಲ್ಲಿ ಎ.ಆರ್. ರೆಹಮಾನ್ ಹಾಗೂ ಸೈರಾ ವಿವಾಹ ಆಗಿದ್ದರು. ತಾಯಿ ನೋಡಿದ ಹುಡುಗಿಯನ್ನು ಮದುವೆ ಆದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ.