ಯಾವುದೇ ಸಮಾಜಕ್ಕೆ ಅನ್ಯಾಯ ಆಗದ ರೀತಿ ಮೀಸಲಾತಿ ಜಾರಿಗೆ ತರುತ್ತೇವೆ : ಸಚಿವ ಕಾರಜೋಳ

ಹೊಸದಿಗಂತ ವರದಿ ಬಾಗಲಕೋಟೆ:

ಸರ್ಕಾರ ಎಲ್ಲ ವರ್ಗದವರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೆ, ಯಾವುದೇ ಸಮಾಜಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಜಲ ಸಂಪನ್ಮೂಲಗಳ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಅವರು ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ,ಸಿದ್ದರಾಮಯ್ಯ ಹೇಳಲಿ, ಜವಾಬ್ದಾರಿಯ ನಾಯಕರಿದ್ದಾರೆ ಅವರು ಏನ ಹೇಳಬೇಕಾಗಿದೆ ಹೇಳಲಿ,ಜನರಿಗೆ ಏನು ಸಂದೇಶ ಕೊಡ್ತಾರೆ ಕೊಡಲಿ ಎಂದು ಸಿದ್ದರಾಮಯ್ಯನವರು ಆರೋಪಕ್ಕೆ ಕಾರಜೋಳ ಅವರು ತಿರುಗೇಟು ನೀಡಿದರು.
ಎಐಸಿಸಿಗೆ ಖರ್ಗೆ ಅಧ್ಯಕ್ಷರಾಗೋ ವಿಚಾರವಾಗಿ ಮಾತನಾಡಿದ ಕಾರಜೋಳ ಅವರು,ಇನ್ನು ಆಯ್ಕೆ ನಾಳೆ ಇದೆ. 19ಕ್ಕೆ ರಿಸಲ್ಟ್ ಬರುತ್ತೆ, ಬಂದ ಮೇಲೆ ಹೇಳ್ತೀನಿ,ಖರ್ಗೆ ಆಗುವುದರಿಂದ ಯಾವುದೇ ಪರಿಣಾಮ ಆಗೋದಿಕ್ಕೆ ಸಾಧ್ಯವಿಲ್ಲ.

ಕಾಂಗ್ರೆಸ್ ಮುಳುಗುವ ಹಡಗುವಾಗಿದ್ದು,ಮುಳುಗುವ ಹಡಗಿನಲ್ಲಿ ನಾವಿಕನನ್ನಾಗಿ ಖರ್ಗೆ ಅವರನ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು 10 ವರ್ಷ ಯುಪಿಎ ಸರ್ಕಾರ ಇತ್ತು. ಅವಾಗ ಖರ್ಗೆ ಅವರನ್ನ ಅಧ್ಯಕ್ಷ ಮಾಡಬಹುದಿತ್ತು, ಅವಾಗ ಯಾಕೆ ಮಾಡಲಿಲ್ಲ.. ಮಾಡಬೇಕಿತ್ತಲ್ಲ ಎಂದು ಪ್ರಶ್ನೆ ಮಾಡಿದ ಕಾರಜೋಳ ಅವರು,ದೇಶದಲ್ಲಿ ಅಧಿಕಾರಿ ನಡೆಸುವಾಗ ಮಾಡಿದ್ರೆ ಅದಕ್ಕೊಂದು ಅರ್ಥ ಇತ್ತು.

ರಾಜ್ಯದಲ್ಲಿ 9 ಬಾರಿನೋ 11 ಬಾರಿನೋ ಆಯ್ಕೆ ಆಗಿರುವ ಖರ್ಗೆ ಅವರು,ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಬಹುದಿತ್ತು, ಯಾಕೆ ಮಾಡಲಿಲ್ಲ,ಕಾಂಗ್ರೆಸ್ ನವರು ದೀನದಲಿತರನ್ನ ಓಟ್ ಬ್ಯಾಂಕ್ ಮಾಡಿಕೊಳ್ಳುವ ಸಲುವಾಗಿ ಅಷ್ಟೇ ರಾಜಕಾರಣ ಮಾಡುತ್ತಾರೆ.

ದಲಿತರ ಉದ್ದಾರ ಆಗಲಿ, ಅವರಿಗೆ ಕೊಡುವುದಾಗಲಿ ಕಾಂಗ್ರೆಸ್ ಯಾವತ್ತೂ ಮಾಡಿಲ್ಲ ಎಂದು ಆರೋಪಿಸಿದ ಕಾರಜೋಳ ಅವರು, ಈಗ ಅದು ಮುಳುಗುತ್ತೆ ಅಂತ ಗೊತ್ತಾಗಿದೆ.. ಅದಕ್ಕೆ ಮಾಡ್ತಿದ್ದಾರೆ.
ಕಾಂಗ್ರೆಸ್ ಈ ದೇಶದಲ್ಲಿ ಉಳಿಲಿಕ್ಕೆ ಸಾಧ್ಯವಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!