ನಾವು ಸಂಬಾಜಿ ಮಹಾರಾಜರ ಸಾವು ಮರೆಯುವುದಿಲ್ಲ: ಶಾಸಕ ರಾಜಾಸಿಂಗ್

ದಿಗಂತ ವರದಿ ವಿಜಯಪುರ:

ಬಾಬ್ರೀ ಮಸೀದಿ ಧ್ವಂಸ ನೀವು ಎಲ್ಲಿಯವರೆಗೆ ಮರೆಯುವದಿಲ್ಲವೋ, ಹಾಗೆ ನಾವು ಸಂಬಾಜಿ ಮಹಾರಾಜ ಸಾವು ಮರೆಯುವದಿಲ್ಲ ಎಂದು ಶಾಸಕ ರಾಜಾಸಿಂಗ್ ಹೇಳಿದರು.

ನಗರದ ಛತ್ರಪತಿ ಶಿವಾಜಿ ವೃತ್ತದಲ್ಲಿ ಹಮ್ಮಿಕೊಂಡ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

39 ದಿನಗಳು ಒಂದೋಂದು ಅಂಗಾಂಗ ಕತ್ತರಿಸಿ ಸಂಬಾಜಿ ಮಹಾರಾಜರ ಕೊಲೆ ಮಾಡಲಾಗಿತ್ತು. ಹಿಂದೂ ಸಾಮ್ರಾಟ ಸಂಬಾಜಿ ಮಾಹಾರಾಜರ ಕೊಲೆ ನಾವು ಮರೆಯುವದಿಲ್ಲ ಎಂದರು.

ಶಿವಾಜಿ ಮಹಾರಾಜರು ಇರದೇ ಹೋಗಿದ್ದರೆ ನಾವು ಎಲ್ಲ ಇರುತ್ತಿದ್ದೇವು. ಇಂದು ಗೋ ಮಾತೆಯ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ಛತ್ರಪತಿ ಶಿವಾಜಿ ಮಹಾರಾಜರ ಹಾಗೆ ಮಕ್ಕಳನ್ನು ಬೆಳೆಸಬೇಕಿದೆ. ಛತ್ರಪತಿ ಶಿವಾಜಿ ಮಹಾರಾಜರ ಕನಸು ಹಿಂದೂ ರಾಷ್ಟ್ರ ಮಾಡುವುದಾಗಿತ್ತು ಎಂದರು‌.

ಪುಲ್ವಾಮಾದಲ್ಲಿ ನಮ್ಮ ಸೈನಿಕರ ಮೇಲೆ ದಾಳಿ ಮಾಡಿದಾಗ ನಮ್ಮ ಸೈನಿಕರು ಸಾವನಪ್ಪುತ್ತಾರೆ. ಆಗ ನಮ್ಮ ಪ್ರಧಾನಿ ಹೇಳುತ್ತಾರೆ ಅವರೆಲ್ಲಿ ಇದ್ದಾರೆ ಅಲ್ಲಿ ಹೊಕ್ಕು ಹೊಡಿರಿ ಎಂದು. ಆಗ ನಮ್ಮ ಸೈನಿಕರು ಪಾಕಿಸ್ಥಾನ ಹೊಕ್ಕು ಸರ್ಜಿಕಲ್ ಸ್ಟ್ರೈಕ್ ಮಾಡಿ ಅವರ ಬಂಕರ್ ಗಳನ್ನು ದ್ವಂಸಗೊಳಿಸದರು ಎಂದರು.

ಮತದಾನಕ್ಕಾಗಿ ಕೆಲವು ರಾಜಕಾರಣಿಗಳು ಟಿಪ್ಪು ಸುಲ್ತಾನ ಅವರನ್ನು ತಮ್ಮ ತಂದೆಯವರನ್ನಾಗಿ ಸಹಿತ ಮಾಡಿಕೊಳ್ಳುತ್ತಾರೆ ಎಂದು ದೂರಿದರು.

ಪಾಕಿಸ್ಥಾನ ಜಿಂದಾಬಾದ್ ಎಂದು ಕೂಗಲಾಯಿತು. ಆದರೆ ನೀವು ಪಾಕಿಸ್ಥಾನಕ್ಕೆ ಹೊಗಿ ನೋಡಿ, ನಿಮ್ಮ‌ನ್ನು ನಾಯಿ ಎಂದು ಅವರು ಕರೆಯುತ್ತಾರೆ ಎಂದರು.

ನಾನು ಎಲ್ಲಿಯವರೆಗೆ ಜೀವಂತ ಇರುವೆ ಅಲ್ಲಿಯವರೆಗೆ ದೇಶ ರಕ್ಷಣೆ, ಧರ್ಮದ ರಕ್ಷಣೆ ಮಾಡುವೆ, ಧರ್ಮಾಂದರ ವಿರುದ್ದ, ಲೌವ್ ಜಿಹಾದಿಗಳ ವಿರುದ್ದ ಯುದ್ಧ ಮಾಡುವೆ ಎಂದರು.

ಎಲ್ಲಿಯವರೆಗೆ ಭಾರತ ದೇಶ ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವದಿಲ್ಲವೋ, ಅಲ್ಲಿಯವರೆಗೆ ನಾವು ಸುಮ್ಮನೆ ಕೂಡುವದಿಲ್ಲ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಮುಖಂಡರು ಸೇರಿದಂತೆ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!