ಯಾವುದೇ Exit Polls ಚರ್ಚೆಗಳಲ್ಲಿ ನಾವು ಭಾಗವಹಿಸಲ್ಲ: ಕಾಂಗ್ರೆಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೋತ್ತರ ಸಮೀಕ್ಷೆ(Exit Polls) ಕುರಿತ ಚರ್ಚೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್‌ ಅಧಿಕೃತವಾಗಿ ತಿಳಿಸಿದೆ.

ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ (Pawan Khera) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ಮತ ಚಲಾಯಿಸಿದ್ದು, ತೀರ್ಪು ಭದ್ರವಾಗಿದೆ. ಚುನಾವಣೋತ್ತರ ಸಮೀಕ್ಷೆ ಚರ್ಚೆಯಲ್ಲಿ (Debate) ನಾವು ಭಾಗವಹಿಸುವುದಿಲ್ಲ. ಜೂನ್ 4 ರಿಂದ ನಾವು ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ.

ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ತಿಳಿಸುವುದು ಆಗಿರಬೇಕು. ಆದರೆ ಆರ್‌ಪಿಗಾಗಿ ಊಹಾಪೋಹ ಮತ್ತು ಸ್ಲಗ್‌ಫೆಸ್ಟ್‌ನಲ್ಲಿ ಪಾಲ್ಗೊಳ್ಳಲು ನಮಗೆ ಇಷ್ಟವಿಲ್ಲ ಎಂದು ಬರೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಯ ಕೊನೆಯ ಮತ್ತು 7ನೇ ಹಂತದ ಮತದಾನ ಶನಿವಾರ ನಡೆಯಲಿದೆ. ನಾಳೆ ಸಂಜೆ 6 ಗಂಟೆಯ ನಂತರ ಮಾಧ್ಯಮಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!