ನಿಮ್ಮಿಬ್ರನ್ನು ಪೀಸ್‌ಪೀಸ್‌ ಮಾಡಿ ಸೂಟ್‌ಕೇಸ್‌ಗೆ ಹಾಕ್ತೀವಿ: ಸಿಎಂ, ಡಿಸಿಎಂಗೆ ಕೊಲೆ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿಮ್ಮಿಬ್ರನ್ನು ಪೀಸ್‌ಪೀಸ್‌ ಮಾಡಿ ಸೂಟ್‌ಕೇಸ್‌ಗೆ ಹಾಕ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ​ಅವರಿಗೆ ಬೆದರಿಕೆ ಮೇಲ್ ಒಂದು ಬಂದಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಕೊಲೆ ಮಾಡುವುದಾಗಿ ಕಿಡಿಗೇಡಿಯೊಬ್ಬ ಇ–ಮೇಲ್‌ ಮೂಲಕ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಇಬ್ಬರನ್ನೂ ಕೊಲೆ ಮಾಡಿ ಫ್ರಿಜ್‌ ಮತ್ತು ಟ್ರ್ಯಾಲಿ ಬ್ಯಾಗ್‌ಗೆ ತುಂಬುವುದಾಗಿ ಇ–ಮೇಲ್‌ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ಈ ಸಂದೇಶ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಿಂಧಾರ್‌ ರಜಪೂತ್‌ ಹೆಸರಿನ ಇ–ಮೇಲ್‌ನಿಂದ ಈ ಬೆದರಿಕೆ ಸಂದೇಶ ಬಂದಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಬೆದರಿಕೆ ಇ–ಮೇಲ್‌ ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವರು, ನಗರ ಪೊಲೀಸ್‌ ಕಮಿಷನರ್‌ಗೂ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಮಪುರ ಪ್ರಭಾಕರ್​ಗೆ ಒಂದು ಕೋಟಿ ಸಾಲ ಕೊಟ್ಟಿದ್ದೇನೆ. ಆತ ಇದುವರೆಗೂ ಸಾಲ ವಾಪಸ್ ಕೊಟ್ಟಿಲ್ಲ. ಪ್ರಭಾಕರ್​ಗೆ ಬೇಗ ಸಾಲ ವಾಪಸ್ ಕೊಡೋಕೆ‌ ಹೇಳಿ. ಆ ಪ್ರಭಾಕರ್ ಹಣವನ್ನು ತನ್ನ ನಾದಿನಿ ಹಾಗೂ ಪೋಷಕರ ಮನೆಯಲ್ಲಿ ಇಟ್ಟಿದ್ದಾನೆ ಎಂದು ಬರೆಯಲಾಗಿದೆ. ಪ್ರಭಾಕರ್ ಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಒಬ್ಬ ಮಗನಿಗೆ ಮದುವೆ ಮಾಡಿದ್ದಾನೆ. ಸಾಲದ ಹಣವನ್ನು ವಾಪಸ್ ನೀಡಲು ಆತನಿಗೆ ಆದಾಯ ಮೂಲ ಇಲ್ಲ. ಹೀಗಾಗಿ ಪ್ರಭಾಕರ್ ನ ಕೊಲೆ ಮಾಡ್ತೀನಿ. ನೀವು ಹಣ ಕೊಡಿಸಿಲ್ಲ ಅಂದ್ರೆ ನಿಮ್ಮನ್ನು ಕೊಲೆ ಮಾಡ್ತೀನಿ ಅಂತ ಇ‌ಮೇಲ್ ಮಾಡಿದ್ದಾನೆ.

ಸದ್ಯ ಇ ಮೇಲ್ ಆಧರಿಸಿ ದೂರು ದಾಖಲಿಸಿರೋ ಪೊಲೀಸರು, ಎಫ್ ಐ ಆರ್ ದಾಖಲಿಸಿ ಸಿಂದಾರ್ ರಜಪೂತ್ ಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!