ಶೀಘ್ರವೇ ಎಲ್ಲದ್ದಕ್ಕೂ ಬ್ರೇಕ್‌ ಹಾಕುತ್ತೇವೆ: ಡಿಸಿಎಂ ಡಿಕೆಶಿಗೆ ಕಾಂಗ್ರೆಸ್‌ ಹೈಕಮಾಂಡ್‌ ಅಭಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ವಾರಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಭರವಸೆ ನೀಡಿದೆ.

ವಿದೇಶ ಪ್ರವಾಸ ಮುಗಿಸಿ ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಭೆಯ ನಂತರ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಸೂಚನೆ ಮೇರೆಗೆ ಪರಮೇಶ್ವರ್‌ ಅವರು ತಾವು ಆಯೋಜನೆ ಮಾಡಿದ್ದ ಡಿನ್ನರ್‌ ಮುಂದೂಡಿದ್ದಾರೆ.

ಶೀಘ್ರವೇ ಎಲ್ಲದ್ದಕ್ಕೂ ಬ್ರೇಕ್‌ ಹಾಕುತ್ತೇವೆ. ನಾವು ರಾಜ್ಯಕ್ಕೆ ಬರಬೇಕಾ? ಅಥವಾ ದೆಹಲಿಗೆ ನಾಯಕರನ್ನು ಕರೆಸಿಕೊಳ್ಳಬೇಕಾ ಎಂಬುದನ್ನು ನಿರ್ಧರಿಸುತ್ತೇವೆ. ಎರಡು ವಾರದೊಳಗೆ ಎಲ್ಲಾ ಗೊಂದಲ ಬಗೆಹರಿಸುತ್ತೇವೆ ಎಂಬ ಭರವಸೆಯನ್ನು ಹೈಕಮಾಂಡ್‌ ನೀಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!