ಹೊಸದಿಗಂತ ವಿಜಯನಗರ:
ವಕ್ಫ್ ಆಸ್ತಿಗೆ ನೋಟಿಸ್ ನೀಡಿವ ಪದ್ಧತಿ ಇಂದು ನಿನ್ನೆಯದಲ್ಲ. ಒಂದೊಮ್ಮೆ ರೈತರಿಗೆ ನೋಟಿಸ್ ನೀಡಿದ್ದರೆ, ಅದನ್ನು ಹಿಂಪಡೆಯುತ್ತೇವೆ ಎಂದು ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರದಿಗೆ ಅವರು ಮಾತನಾಡಿದರು.
ವಕ್ಫ್ ಆಸ್ತಿಗೆ ಸಂಬಂಧಿಸಿ ನೋಟಿಸ್ ನೀಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. 2008ರಿಂದ 2013, 2019ರಿಂದ 2023ರ ವರೆಗೆ ಆಡಳಿತದಲ್ಲಿ ಬಿಜೆಪಿ ಅವಧಿಯಲ್ಲಿ ಸಾವಿರಾರು ಜನರಿಗೆ ನೋಟಿಸ್ ನೀಡಿದೆ. ಆಗ ಸಚಿವರಾಗಿದ್ದ ಸಿ.ಟಿ.ರವಿಗೆ ವಕ್ಫ್ ಪ್ರಕ್ರಿಯೆ ಗೊತ್ತಿರಲಿಲ್ಲವೇ ಎಂದು ತಿರುಗೇಟು ನೀಡಿದರು.
೨೦೧೬ರ ನಂತರ ಕಬರಸ್ಥಾನಕ್ಕಾಗಿ ಸರ್ಕಾರ ಕಬರಸ್ಥಾನ, ಕ್ರಿಶ್ಚಿಯನ್ ಸ್ಮಶಾನಕ್ಕೆ ಭೂಮಿ ನೀಡಿದೆ. ಅದರಂತೆ ಸರ್ಕಾರ ಕಬರಸ್ಥಾನಕ್ಕೆ ಮಾತ್ರ ಜಾಗ ನೀಡಿದೆ. ಅದು ಬಿಟ್ಟರೆ, ಸರ್ಕಾರದಿಂದ ಒಂದಿಂಚೂ ಜಾಗ ನೀಡಿಲ್ಲ. ವಕ್ಫ ಹೆಸರಲ್ಲಿರುವ ಎಲ್ಲ ಆಸ್ತಿಗಳು ದಾನಿಗಳು ನೀಡಿದ್ದೇ ಎಂದು ಸ್ಪಷ್ಟಪಡಿಸಿದರು.
ವಿಜಯಪುರದಲ್ಲಿ 1200ಎಕರೆ ರೈತರ ಜಮೀನುಗಳನ್ನು ವಕ್ಪ್ ಸ್ವಾಧೀನ ಪಡೆದುಕೊಂಡು ಎಂದು ಪ್ರತಿಪಕ್ಷ ನಾಯಕರು ಆರೋಪ ಮಾಡಿದ್ದಾರೆ. ಆದರೆ, ಅಲ್ಲಿರುವುದು ಕೇವಲ 11 ಎಕರೆ ಮಾತ್ರ ಇದೆ. ಬಿಜೆಪಿಯವರು ಕೇವಲ ರೈತರನ್ನು ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ. ಬಿಜೆಪಿಗರು ರಾಜಕೀಯ ಉದ್ದೇಶದಿಂದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಬೇಕಾಬಿಟ್ಟಿಯಾಗಿ ಆಸ್ತಿಯನ್ನು ವಕ್ಫ್ ಎಂದು ಘೋಷಿಲು ಸಾಧ್ಯವಿಲ್ಲ. ಅಂತಹ ಕೃತ್ಯಕ್ಕೆ ರಾಜಕಾರಣಿಗಳು ಬಯಸಿದರೂ, ಅಧಿಕಾರಿಗಳು ಒಪ್ಪುವರೇ? ನ್ಯಾಯಾಲಯ ಒಪ್ಪುವುದೇ ಎಂದು ಮರು ಪ್ರಶ್ನಿಸಿದರು.