ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ 2-3, 1984 ರಂದು, ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಸ್ಥಾವರದಲ್ಲಿ ವಿಷಕಾರಿ ಅನಿಲ ಮೀಥೈಲ್ ಐಸೊಸೈನೈಡ್ ಸೋರಿಕೆಯಿಂದಾಗಿ ಸಂಭವಿಸಿದ ಅಪಘಾತ ಇಂದಿಗೂ ದೇಶದ ಜನರ ಮನಸಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಗಟನೆ ನಡೆದು 39 ವರ್ಷಗಳ ಬಳಿಕ ಈ ಕುರಿತ ವೆಬ್‌ಸಿರೀಸ್ ಬರಲಿದೆ.
ಇಂತಹ ಹಲವು ಘಟನೆಗಳ ಮೇಲೆ ಧಾರಾವಾಹಿ, ಸಿನಿಮಾಗಳು ತಯಾರಾಗುತ್ತಿರುವುದು ಹೊಸತೇನಲ್ಲ. ಇದೀಗ ಭೋಪಾಲ್ ಅನಿಲ ದುರಂತದ ಮೇಲೆ ವೆಬ್ ಸೀರೀಸ್ ಬರುತ್ತಿದೆ. ಘಟನೆ ಸಂಭವಿಸಿದಾಗ, ಹತ್ತಿರದಲ್ಲಿದ್ದ ಅನೇಕ ರೈಲ್ವೆ ಉದ್ಯೋಗಿಗಳು ಸಹಾಯದಿಂದ ಅನೇಕ ಜೀವಗಳನ್ನು ಉಳಿಸಿದರು. ಈ ಸರಣಿಯನ್ನು ರೈಲ್ವೆ ನೌಕರರ ಹಿನ್ನೆಲೆಯಿಂದ ತೆಗೆದುಕೊಳ್ಳಲಾಗುವುದು. ಈ ಸರಣಿಗೆ ‘ದಿ ರೈಲ್ವೇ ಮೆನ್‘ ಎಂದು ಹೆಸರಿಡಲಾಗಿದೆ.
ಇದರಲ್ಲಿ ನಟ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಶಿವ ರವೇಲಿ ಈ ಸರಣಿಯನ್ನು ಬಾಲಿವುಡ್‌ನಲ್ಲಿ ನಿರ್ಮಿಸುತ್ತಿದ್ದಾರೆ. ‘ದಿ ರೈಲ್ವೇ ಮೆನ್’ ಸರಣಿಯು ನವೆಂಬರ್ 18 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಘೋಷಿಸಲಾಗಿದೆ.
ಈ ಭೋಪಾಲ್ ಅನಿಲ ದುರಂತ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಸುಮಾರು 6 ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಕೆಲವು ವರ್ಷಗಳ ನಂತರವೂ ಈ ಅನಿಲ ಸೋರಿಕೆಯ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದರ ಪ್ರಭಾವ ಹೆಚ್ಚಿತ್ತು.