May 17, 2026
Sunday, May 17, 2026
spot_img

ತಾಳಿ ಕಟ್ಟೋ ಶುಭ ವೇಳೆ ಮದುವೆ ಕ್ಯಾನ್ಸಲ್: ಕಾರಣ ಗೊತ್ತಾದ್ರೆ ಶಾಕ್ ಆಗ್ತೀರ ಪಕ್ಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಮಂಟಪದಲ್ಲಿ ಮಂತ್ರೋಚ್ಚಾರಗಳು ಮೊಳಗುತ್ತಿದ್ದ ಕ್ಷಣದಲ್ಲಿ ಅಚ್ಚರಿಯ ತಿರುವೊಂದು ಸಂಭವಿಸಿ ಮದುವೆಯೇ ಕ್ಯಾನ್ಸಲ್ ಆದ ಘಟನೆ ನಡೆದಿದೆ. ಈ ಅಸಾಮಾನ್ಯ ಘಟನೆಗೆ ಕಾರಣವಾಗಿದ್ದು ವರದಕ್ಷಿಣೆ ಬೇಡಿಕೆ.

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಮಾಜಿಕವಾಗಿ ಚರ್ಚೆಗೆ ಕಾರಣವಾಗಿದೆ. ಮದುವೆಗಾಗಿ ತಿಂಗಳಗಟ್ಟಲೆ ಸಿದ್ಧತೆ ನಡೆಸಿದ ವಧುವಿನ ಕುಟುಂಬವು ಈಗಾಗಲೇ ನಿಶ್ಚಿತಾರ್ಥ ಸೇರಿದಂತೆ ಎಲ್ಲಾ ವೆಚ್ಚವನ್ನು ಭರಿಸಿತ್ತು. ಆದರೆ, ವರ್ಣಕಡೆಯಿಂದ ಮಹಿಂದ್ರಾ ಸ್ಕಾರ್ಪಿಯೊ ಕಾರನ್ನು ವರದಕ್ಷಿಣೆಯಾಗಿ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು.

ಇದನ್ನೂ ಓದಿ:

ವಧುವಿನ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದ್ದರೂ ಮದುವೆಯ ನಂತರ ಕಾರು ಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಮದುವೆಯ ಕ್ಷಣದಲ್ಲೇ ಕಾರಿನ ಕೀ ಕೊಡಬೇಕು ಎಂದು ವರ ಷರತ್ತು ವಿಧಿಸಿದನು. ಮಂಟಪದಲ್ಲಿ ಕಾರು ಇಲ್ಲವೆಂಬ ಕಾರಣಕ್ಕೆ ವರ ಮದುವೆಗೆ ನಿರಾಕರಿಸಿದ್ದಾನೆ.

ಕುಟುಂಬಸ್ಥರು ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಮಾತಿನ ಚಕಮಕಿ ಹೆಚ್ಚಾಗಿ ಮದುವೆ ಸಂಪೂರ್ಣವಾಗಿ ರದ್ದಾಯಿತು. ಈ ಘಟನೆ ವರದಕ್ಷಿಣೆ ಸಮಸ್ಯೆಯ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !