ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಮೆಗಾಸ್ಟಾರ್ ಕುಟುಂಬದ (Megastar Family) ಮನೆ ಮಗ ನಟ ವರುಣ್ ತೇಜ್ (Varun Tej) ಮದುವೆಗೆ (Wedding) ಸಕಲ ಸಿದ್ಧತೆ ನಡೆಯುತ್ತಿದೆ.ಬಹುಕಾಲದ ಗೆಳತಿ ನಟಿ ಲಾವಣ್ಯ ಜೊತೆ ಎಂಗೇಜ್ ಆಗಲು ವರುಣ್ ರೆಡಿಯಾಗಿದ್ದಾರೆ.
ನಟಿ ಲಾವಣ್ಯ ತ್ರಿಪಾಠಿ ಜೊತೆ ವರುಣ್ ತೇಜ್ ಕಳೆದ ಐದಾರು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಗುರುಹಿರಿಯರು ಕೂಡ ಇಬ್ಬರ ಪ್ರೀತಿಗೆ ಸಮ್ಮತಿ ಸೂಚಿಸಿದ್ದಾರೆ. ಜೂನ್ 9ಕ್ಕೆ (June 9) ವರುಣ್- ಲಾವಣ್ಯ ಎಂಗೇಜ್‌ಮೆಂಟ್ ಡೇಟ್ ಫಿಕ್ಸ್ ಆಗಿದೆ. ಹೈದರಾಬಾದ್‌ನಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಜರುಗಲಿದೆ.