Saturday, February 4, 2023

Latest Posts

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ: ನಟಿ ಅದಿತಿ ಪ್ರಭುದೇವ ಆರತಕ್ಷತೆಗೆ ಸಾಕ್ಷಿಯಾದ ಗಣ್ಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ್ ನಾಳೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಿತು.

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ ಆರತಕ್ಷತೆಯಲ್ಲಿ ಗುಲಾಬಿ ಬಣ್ಣದ ಲೆಹಂಗಾ ಧರಿಸಿ ವಧು ಅದಿತಿ ಹಾಗೂ ನೀಲಿ ಬಣ್ಣದ ಶೆರ್ವಾನಿ ಸೂಟ್ ಧರಿಸಿ ವರ ಯಶಸ್ವಿ ಮಿಂಚುತ್ತಿದ್ದಾರೆ.

ಈ ಸಂಭ್ರಮಕ್ಕೆ ಯಶ್, ರಾಧಿಕಾ ಪಂಡಿತ್, ಲಹರಿ ವೇಲು ,ಚಿಕ್ಕಣ್ಣ, ಮೇಘನಾ ಶೆಟ್ಟಿ , ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ಹಿರಿಯ ನಟಿ ತ್ರಿವೇಣಿ , ನಿರ್ಮಾಪಕ ಉದಯ್ ಕೆ ಮೆಹ್ತಾ, ನಟ ನವೀನ್ ಕೃಷ್ಣ, ಸಚಿವ ಸೋಮಣ್ಣ ಸೇರಿ ಸಿನಿಮಾ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.

ಅದಿತಿ ಪ್ರಭುದೇವ್ ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟಿಯಾಗಿದ್ದು, ಉದ್ಯಮಿ ಯಶಸ್ವಿ ಅವರ ಜೊತೆ ಹೊಸ ಜೀವನಕ್ಕೆ ಅದಿತಿ ಕಾಲಿಡುತ್ತಿದ್ದು, ಈಗಾಗಲೇ ತಮ್ಮ ಭಾವಿ ಪತಿಯನ್ನು ಅಭಿಮಾನಿಗಳಿಗೆ ಹಲವಾರು ಬಾರಿ ಪರಿಚಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!