VIRAL VIDEO| 51 ಟ್ರ್ಯಾಕ್ಟರ್‌ಗಳಲ್ಲಿ 200 ಅತಿಥಿಗಳು: ವೈರಲ್ ಆಗುತ್ತಿದೆ ಮದುವೆಯ ಮೆರವಣಿಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂದಿನ ಕಾಲದ ಹಾಗಲ್ಲ, ಈಗ ಮದುವೆಗಳನ್ನು ಇನ್ನೂ ಸ್ಪೆಷಲ್ ಆಗಿ ಮಾಡಬೇಕೆಂದು ಏನೇನೋ ಮಾಡ್ತಾರೆ. ರಾಜಸ್ಥಾನದಲ್ಲಿ ನಡೆದ ಮದುವೆಯ ಮೆರವಣಿಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ರಾಜಸ್ಥಾನದ ಬಾರ್ಮರ್‌ನಲ್ಲಿ ವರನ ಮೆರವಣಿಗೆ ಚರ್ಚೆಗೆ ಗ್ರಾಸವಾಗಿದೆ. ವರನೊಂದಿಗೆ ಮದುವೆ ಮೆರವಣಿಗೆ 51 ಟ್ರ್ಯಾಕ್ಟರ್‌ಗಳಲ್ಲಿ ಹೊರಡುತ್ತದೆ. ಅದರಲ್ಲಿ ಒಂದನ್ನು ಮದುಮಗನೇ ಓಡಿಸಿದ್ದಾನೆ. ಗುಡಮಲಾನಿ ಗ್ರಾಮದ ಪ್ರಕಾಶ ಚೌಧರಿ ಅವರು ರೋಲಿ ಗ್ರಾಮದ ಮಮತಾ ಅವರನ್ನು ವಿವಾಹವಾಗಿದ್ದಾರೆ. ಈ ಸಮಾರಂಭದ ಅಂಗವಾಗಿ ವರನ ಮನೆಯಿಂದ 51 ಕಿ.ಮೀ ದೂರದ ರೋಲಿ ಗ್ರಾಮಕ್ಕೆ ಮೆರವಣಿಗೆ ಹೊರಡುತ್ತದೆ. 51 ಟ್ರ್ಯಾಕ್ಟರ್‌ಗಳಲ್ಲಿ 200ಕ್ಕೂ ಹೆಚ್ಚು ಅತಿಥಿಗಳು ಆಗಮಿಸಿದ್ದರು.

ವರನ ತಂದೆ ಜೇತರಾಂ ಮತ್ತು ತಾತನ ಮದುವೆಗಳನ್ನು ಒಂಟೆಗಳ ಮೇಲೆ ಮೆರವಣಿಗೆ ಮಾಡಲಾಯಿತು. ಇದೀಗ ಮಗನ ಮದುವೆಯ ವೇಳೆ 51 ಟ್ರ್ಯಾಕ್ಟರ್ಗಳಲ್ಲಿ ದಿಬ್ಬಣ ಹೋಗುವ ಇಂಗಿತ ವ್ಯಕ್ತಪಡಿಸಿದ್ದರಂತೆ ವರನ ತಂದೆ. 20 ರಿಂದ 30 ಟ್ರ್ಯಾಕ್ಟರ್‌ಗಳನ್ನು ಅವರ ಕುಟುಂಬದವರು ಹೊಂದಿದ್ದಾರೆ, ಅವರ ಮುಖ್ಯ ಉದ್ಯೋಗ ಕೃಷಿಯಾಗಿದೆ. ಉಳಿದ ರೈತ ಮಿತ್ರರಿಂದ ಒಟ್ಟು 51 ಟ್ರ್ಯಾಕ್ಟರ್ ಗಳಲ್ಲಿ ಮದುವೆ ಮೆರವಣಿಗೆ ಆಯೋಜಿಸಲಾಗಿತ್ತು. ಅಷ್ಟೊಂದು ಟ್ರ್ಯಾಕ್ಟರ್‌ಗಳೊಂದಿಗೆ ವಧು ಮೆರವಣಿಗೆಯಲ್ಲಿ ಗ್ರಾಮಕ್ಕೆ ತಲುಪಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಅದೂ ಅಲ್ಲದೆ ನೋಡಲು ಕಣ್ಣಿಗೆ ಆನಂದವನ್ನೂ ಉಂಟು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!