ಬಾಲಿವುಡ್‌ನ ಲ್ಲಿ ಸೈಲೆಂಟ್ ಆಗಿ ನಡೆಯುತ್ತಿದೆ ಮದುವೆ ತಯಾರಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಸಿದ್-ಕಿಯಾರಾ ಜೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಲ್ಲಿ ಮತ್ತೊಂದು ಜೋಡಿ ಸಪ್ತಪದಿ ತುಳಿಯಲು ರೆಡಿಯಾಗಿದ್ದು, ಸಿದ್ಧಾರ್ಥ್ ಮತ್ತು ಕಿಯಾರಾ ಅಡ್ವಾಣಿ ಹೊಸ ವರ್ಷಕ್ಕೆ ಹೊಸ ಬಾಳಿಗೆ ಕಾಲಿಡಲು ನಿರ್ಧರಿಸಿದ್ದಾರೆ.
ಇದುವರೆಗೂ ಈ ಬಗ್ಗೆ ಮಾತನಾಡದೇ ಸೀಕ್ರೆಟ್ ಮೈನ್‌ಟೈನ್ ಮಾಡ್ತಿದ್ದ ಈ ಜೋಡಿ ಮದುವೆಯ ಮುದ್ರೆ ಒತ್ತಲು ತೆರೆಮರೆಯಲ್ಲಿ ವೇದಿಕೆ ರೆಡಿಯಾಗುತ್ತಿದೆ. 2023ರ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗುತ್ತಿದ್ದಾರೆ.
ಜೈಸಲ್ಮೇರ್ ಪ್ಯಾಲೇಸ್‌ನಲ್ಲಿ ಫೆ.4 ಮತ್ತು 5ರಂದು ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆರತಕ್ಷತೆ ಇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!