Saturday, February 24, 2024

ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ: ಮರಳಿ ಮನೆಯತ್ತ ಹೊರಟ ಪ್ರವಾಸಿಗರು

ಹೊಸದಿಗಂತ ವರದಿ,ಅಂಕೋಲಾ:

ರಾಜ್ಯದಲ್ಲಿ ಕೋವೀಡ್ ಸೋಂಕಿತರ ಸಂಖ್ಯೆಯಲ್ಲಿ ಏರಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಆದೇಶ ಹೊರಡಿಸಿದ್ದು ಕೆಲವು ದಿನಗಳ ಕಾಲ ನಿರಾತಂಕವಾಗಿ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಜಿಲ್ಲೆಯ ಜನತೆ ಒಲ್ಲದ ಮನಸ್ಸಿನಿಂದ ಮತ್ತೊಮ್ಮೆ ವಾರಾಂತ್ಯದ ಕರ್ಫ್ಯೂಗೆ ಸಿದ್ಧರಾಗಿದ್ದಾರೆ.
ಕಳೆದ ಎರಡು ವರ್ಷಗಳ ಕಾಲ ಕೋವೀಡ್ ಮಾರ್ಗಸೂಚಿಯಂತೆ ಲಾಕ್ ಡೌನ್,ಕರ್ಫ್ಯೂ ಎದುರಿಸಿ ವ್ಯಾವಹಾರಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ ಜನರಿಗೆ ಮತ್ತೊಮ್ಮೆ ವಾರದ ಕೊನೆಯ ಎರಡು ದಿನಗಳ ಕಾಲ ಹೇರಿರುವ ನಿರ್ಭಂದನೆಗಳು ಚಿಂತೆ ಹೆಚ್ಚುವಂತೆ ಮಾಡಿದೆ.
ವಾರಾಂತ್ಯದ ಕರ್ಫ್ಯೂ ಕುರಿತಂತೆ ಜಿಲ್ಲೆಯ ಜನರಲ್ಲಿ ಈಗಲೂ ಗೊಂದಲವಿರುವುದು ಕಂಡು ಬಂದಿದ್ದು ಕೆಲವರು ಇದು ಬೆಂಗಳೂರಿಗೆ ಮಾತ್ರ ಸೀಮಿತ ಎಂಬ ಭಾವನೆಯಲ್ಲಿದ್ದಾರೆ.
ಆರಂಭದಲ್ಲಿ ಹೊಟೇಲ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಸೇವೆಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತಾದರೂ ನಂತರ ಹೊಟೇಲ್, ಬಾರ್, ರೆಸ್ಟೋರೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಮರು ಆದೇಶ ಹೊರಡಿಸಲಾಗಿದೆ ಈ ಕುರಿತಂತೆ ಹೊಟೇಲುಗಳ ಮಾಲಿಕರಿಗೂ ಸ್ಪಷ್ಟ ಮಾಹಿತಿ ಇದ್ದ ಹಾಗಿಲ್ಲ.
ಪ್ರವಾಸಿಗರು ವಾಪಸ್
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಗೋಕರ್ಣ ಮತ್ತು ಮುರ್ಡೇಶ್ವರಗಳಲ್ಲಿ ವರ್ಷಾರಂಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಕಂಡು ಬರುತ್ತಿತ್ತು ಇದೀಗ ವಾರಾಂತ್ಯದ ಕರ್ಫ್ಯೂ ಘೋಷಣೆ ಆಗುತ್ತಿದ್ದಂತೆ ಪ್ರವಾಸಿಗರು ಮರಳಿ ಹೋಗುತ್ತಿರುವುದು ಕಂಡು ಬಂದಿದ್ದು ಕೆಲವು ದಿನಗಳ ಹಿಂದೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕಡಲ ತೀರಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!