ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀಕೆಂಡ್, ಗುಡ್‌ಫ್ರೈಡೇ ರಜೆ ಹಿನ್ನೆಲೆಯಲ್ಲಿ ಜನ ತಮ್ಮ ಊರುಗಳಿಗೆ ತೆರಳುತ್ತಿದ್ದು, ಎಲ್ಲೆಡೆ ಬಸ್‌ನ ಟಿಕೆಟ್ ದರ ಹೆಚ್ಚಳವಾಗಿದೆ.
ಟ್ರೈನ್ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ಔಟ್ ಆಗಿದ್ದು, ಅಲ್ಲೇ ಟಿಕೆಟ್ ತೆಗೆದುಕೊಂಡು ಹೋದರೂ ಟ್ರೈನ್‌ನಲ್ಲಿ ನಿಲ್ಲೋದಕ್ಕೂ ಜಾಗ ಇರೋದಿಲ್ಲ. ಇದನ್ನೆಲ್ಲ ಅರಿತ ಪ್ರಯಾಣಿಕರು ಬಸ್ ಮೊರೆ ಹೋಗಿದ್ದಾರೆ. ಆದರೆ ಬಸ್‌ಗಳಲ್ಲಿ ಟಿಕೆಟ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದ್ದು, ಜನ ಕಂಗಾಲಾಗಿದ್ದಾರೆ.
ಅದರಲ್ಲೂ ಕೇರಳ ಮತ್ತು ಆಂಧ್ರಪ್ರದೇಶದ ವಿವಿಧ ಕಡೆಗಳಿಗೆ ತೆರಳುವ ಬಸ್ಸುಗಳ ಟಿಕೆಟ್ ದರ ದುಪ್ಪಟ್ಟಾಗಿದೆ. ವಾರವಿಡೀ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ. ಸುದೀರ್ಘ ವಾರಾಂತ್ಯ ಮತ್ತು ಬೇಸಿಗೆ ರಜೆ ಅಂತರರಾಜ್ಯ ಪ್ರಯಾಣ ದರ ಏರಿಕೆಗೆ ಕಾರಣವಾಗಿದೆ ಎಂದು ಅನೇಕ ಚಾಲಕರು ಮತ್ತು ಕಂಡಕ್ಟರ್ಗಳು ಅಭಿಪ್ರಾಯಪಟ್ಟಿದ್ದಾರೆ.
ಇ-ಬುಕಿಂಗ್ ತಾಣಗಳು ಕೆಲವೊಮ್ಮೆ ರಿಯಾಯಿತಿಗಳನ್ನು ನೀಡುತ್ತವೆ. ಆದರೆ ಪ್ಲಾಟ್‌ಫಾರ್ಮ್ ಶುಲ್ಕಗಳು ಮತ್ತು ಶೇ 18 ರ ಜಿಎಸ್‌ಟಿಯಿಂದಾಗಿ ಸುಮಾರು 250 ರೂ.ಗಳಷ್ಟು ಹೆಚ್ಚು ವೆಚ್ಚವಾಗುತ್ತದೆ ಎನ್ನಲಾಗಿದೆ.