Friday, June 9, 2023

Latest Posts

ವೀಕೆಂಡ್‌ ವಿಥ್‌ ರಮೇಶ್ ಸೀಸನ್‌ 5 : ಜೀ ಕನ್ನಡದಲ್ಲಿ ಇಂದಿನಿಂದ ಸಾಧಕರ ಸ್ಫೂರ್ತಿದಾಯಕ ಪಯಣ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ವಿಭಿನ್ನ ಮನೊರಂಜನಾ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಜೀ ಕನ್ನಡ ವಾಹಿನಿಯು ಮತ್ತೊಮ್ಮೆ ಇನ್ನಷ್ಟು ಸ್ಫೂರ್ತಿದಾಯಕ ಕಥನಗಳೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ʼವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ ೫ʼ ಇಂದಿನಿಂದ ಸಾಧಕರ ಸ್ಫೂರ್ತಿದಾಯಕ ಪಯಣದೊಂದಿಗೆ ತೆರೆಕಾಣಲಿದೆ.

ಇಂದಿನಿಂದ ಕಾರ್ಯಕ್ರಮ ಶುರುವಾಗಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ಕಾರ್ಯಕ್ರಮವು ಪ್ರಸಾರವಾಗಲಿದೆ.

ಹೊಸ ಹೊಸ ಸಾಧಕರು ಮತ್ತು ಹಲವು ವಿಶೇಷತೆಗಳೊಂದಿಗೆ ಈ ಸಲದ ಸೀಸನ್‌ ಮೂಡಿಬರಲಿದೆ ಎಂದು ವಾಹಿನಿ ಹೇಳಿಕೊಂಡಿದೆ.

ವ್ಯಾಪಾರ, ರಾಜಕೀಯ, ಕ್ರೀಡೆ ಮತ್ತು ಮನರಂಜನೆ ಸೇರಿ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ನಿರೂಪಕ ರಮೇಶ್‌ ಅರವಿಂದ್‌ ಸಂವಾದ ನಡೆಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!