ತೂಕ ಕಡಿಮೆ ಇರುವವರು ತಮ್ಮ ದೇಹಕ್ಕೆ ಅಗತ್ಯವಾದ ತೂಕವನ್ನು ಪಡೆಯಲು ಅನೆಕ ಪ್ರಯತ್ನ ಮಾಡುತ್ತಾರೆ. ಅವರ ದೇಹವು ತೂಕ ಪಡೆಯದ ಪರಿಸ್ಥಿತಿಯಲ್ಲಿದ್ದರೆ, ಸರಿಯಾದ ಆಹಾರ ಮತ್ತು ಪೌಷ್ಟಿಕತೆ ಅವಶ್ಯಕವಾಗುತ್ತದೆ. ತೂಕ ಹೆಚ್ಚಿಸಲು ಬಾಳೆಹಣ್ಣು ಮತ್ತು ಹಾಲಿನ ಸೇವನೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.
ತೂಕ ಹೆಚ್ಚಿಸಲು ಬಾಳೆಹಣ್ಣು ಮತ್ತು ಹಾಲು ಸೇವಿಸುವ ಕ್ರಮಗಳು:
- ವ್ಯಾಯಾಮಕ್ಕೂ ಮುನ್ನ: ವ್ಯಾಯಾಮದ 30-45 ನಿಮಿಷ ಮೊದಲು ಬಾಳೆಹಣ್ಣು ಮತ್ತು ಹಾಲು ಸೇವಿಸಬಹುದು. ಬಾಳೆಹಣ್ಣಿನ ನೈಸರ್ಗಿಕ ಸಕ್ಕರೆ ಮತ್ತು ಹಾಲಿನ ಪ್ರೋಟೀನ್ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ, ವ್ಯಾಯಾಮವನ್ನು ಸುಲಭಗೊಳಿಸುತ್ತದೆ.
- ವ್ಯಾಯಾಮದ ನಂತರ: ವ್ಯಾಯಾಮದ ನಂತರ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಬೇಕಾಗುತ್ತದೆ. ಬಾಳೆಹಣ್ಣು ಮತ್ತು ಹಾಲು ಸ್ನಾಯು ಚೇತರಿಕೆ ಹಾಗೂ ಎಲೆಕ್ಟ್ರೋಲೈಟ್ ಮರುಪೂರಣಕ್ಕೆ ಸಹಾಯ ಮಾಡುತ್ತದೆ.
- ಮಧ್ಯಾಹ್ನ ತಿಂಡಿ: ಉಪಾಹಾರ ಮತ್ತು ಮಧ್ಯಾಹ್ನ ಊಟದ ನಡುವೆ ಬಾಳೆಹಣ್ಣು ಮತ್ತು ಹಾಲು ಸೇವಿಸುವುದು ಚಯಾಪಚಯವನ್ನು ಉತ್ತೇಜಿಸುತ್ತದೆ ಮತ್ತು ತೂಕ ಹೆಚ್ಚಿಸಲು ಸಹಕಾರಿ.
- ಸಂಜೆ ತಿಂಡಿ: ಸಂಜೆ ಸ್ವಲ್ಪ ಹಸಿವನ್ನು ಶಮನಗೊಳಿಸಲು ಬಾಳೆಹಣ್ಣು ಮತ್ತು ಹಾಲು ಆರೋಗ್ಯಕರ ಆಯ್ಕೆ. ಇದು ರಾತ್ರಿ ಊಟದವರೆಗೆ ತೃಪ್ತಿಯನ್ನು ನೀಡುತ್ತದೆ.
- ಸ್ಮೂಥಿ ಅಥವಾ ಖೀರ್: ಹಾಲಿನಲ್ಲಿ ಬಾಳೆಹಣ್ಣು ಮಿಶ್ರಣ ಮಾಡಿ ಬೀಜಗಳು, ಚಿಯಾ ಬೀಜಗಳು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬಹುದು. ಹೀಗಾಗಿ ಹೆಚ್ಚುವರಿ ಕ್ಯಾಲೋರಿ ಮತ್ತು ಪೌಷ್ಟಿಕಾಂಶಗಳನ್ನು ಪಡೆಯಬಹುದು.
- ಓಟ್ಸ್ ಪುಡಿಂಗ್: ಓಟ್ಸ್ ಅನ್ನು ಹಾಲಿನಲ್ಲಿ ಬೇಯಿಸಿ, ಮೇಲೆ ಕತ್ತರಿಸಿದ ಬಾಳೆಹಣ್ಣು ಹಾಗೂ ಡ್ರೈ ಫ್ರೂಟ್ಸ್ ಸೇರಿಸಿ ತಿನ್ನಬಹುದು. ಇದು ರುಚಿಕರವಾದ ಮತ್ತು ಪೌಷ್ಟಿಕಾಂಶಯುಕ್ತ ತಿಂಡಿ.
- ಬಾಳೆಹಣ್ಣಿನ ಶೇಕ್: ತಣ್ಣನೆಯ ಹಾಲಿನಲ್ಲಿ ಬಾಳೆಹಣ್ಣು ಬೆರೆಸಿ ಜೇನುತುಪ್ಪ, ಬಾದಾಮಿ ಸೇರಿಸಿ ಶೇಕ್ ತಯಾರಿಸಿ ಸೇವಿಸಬಹುದು. ಇದು ತೂಕ ಹೆಚ್ಚಿಸಲು ಸುಲಭ ಮತ್ತು ರುಚಿಕರ ಮಾರ್ಗ.